
ಕನ್ನಡದ ಧಾರಾವಾಹಿಗಳು
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಎರಡು ಜನಪ್ರಿಯ ಧಾರಾವಾಹಿಗಳು ಮುಕ್ತಾಯದ ಹಂತದಲ್ಲಿವೆ. ಒಂದು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಟ್ಟಕ್ಕನ ಮಕ್ಕಳು’. ಮತ್ತೊಂದು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಯಜಮಾನ’ ಧಾರಾವಾಹಿ.
ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತನ್ನ ಅಂತಿಮ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ. ಈ ಬಗ್ಗೆ ಜೀ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿವೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ
ಇತ್ತೀಚೆಗೆ ಈ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಂಡಿತ್ತು. ಆ ಬೆನ್ನಲ್ಲೆ ಧಾರಾವಾಹಿ ಮುಕ್ತಾಯದ ಬಗ್ಗೆ ನಟ–ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದರ ಜೊತೆಗೆ ಧಾರಾವಾಹಿ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದರು.
ಯಜಮಾನ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಅಂತ್ಯ ಕಾಣಲಿದೆ. ಇದೇ ಧಾರಾವಾಹಿ ಮೂಲಕ ಮಧುಶ್ರೀ ಭೈರಪ್ಪ ಅವರು ಕಿರುತೆರೆ ಲೋಕಕ್ಕೆ ನಟಿಯಾಗಿ ಕಾಲಿಟ್ಟಿದ್ದರು. ಝಾನ್ಸಿ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು. ಬಳಿಕ ಜನ ಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಕೂಡ ತೆಗೆದುಕೊಂಡರು. ರಾಘವೇಂದ್ರ ಪಾತ್ರದಲ್ಲಿ ಹರ್ಷ ಬಿ.ಎಸ್. ಅವರು ನಟಿಸುತ್ತಿದ್ದಾರೆ.
ಯಜಮಾನ ಧಾರಾವಾಹಿ ನಟ ಹಾಗೂ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.