ADVERTISEMENT

ತಮಿಳು ಸರಿಗಮಪ ವೇದಿಕೆ ಮೇಲೆ ಮೋಡಿ ಮಾಡಿದ ಕನ್ನಡತಿ ಶಿವಾನಿ ಈಗ ಫೈನಲಿಸ್ಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ನವೆಂಬರ್ 2025, 12:42 IST
Last Updated 18 ನವೆಂಬರ್ 2025, 12:42 IST
<div class="paragraphs"><p>ಶಿವಾನಿ</p></div>

ಶಿವಾನಿ

   

ಚಿತ್ರ: zeetamizh

https://www.prajavani.net/entertainment/tv/bigg-boss-kannada-ashwini-jahnavi-punishment-3637164ಕನ್ನಡದ ಸರಿಗಮಪ ಕಾರ್ಯಕ್ರಮ ಅದೆಷ್ಟೋ ಗಾಯಕರನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ನಮ್ಮ ರಾಜ್ಯದ ಗಾಯಕರು ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಈಗ ಚಿಕ್ಕಮಗಳೂರಿನ ಗಾಯಕಿ ಶಿವಾನಿ ನವೀನ್ ಈಗ ತಮಿಳು ಸರಿಗಮಪ ಸೀಸನ್-5ರಲ್ಲಿ ಫಿನಾಲೆಗೆ ತಲುಪಿದ್ದಾರೆ.

ADVERTISEMENT

ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19ರಲ್ಲಿ ರನ್ನರ್​ ಅಪ್ ಆಗಿದ್ದ ಚಿಕ್ಕಮಗಳೂರಿನ ಶಿವಾನಿ ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಜೀ ತಮಿಳಿನ ಸರಿಗಮಪ ಸೀಸನ್ 5ರಲ್ಲಿ ಶಿವಾನಿ ತಮಿಳು ಹಾಡನ್ನು ಹಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಗ್ರ್ಯಾಂಡ್ ಆಡಿಷನ್ ವೇಳೆ ಕನ್ನಡದ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಶಿವಾನಿ ನವೀನ್ ತಮಿಳು ಸರಿಗಮಪ ಸೀಸನ್-5ರಲ್ಲಿ ಟಾಪ್‌ 5 ಫೈನಲಿಸ್ಟ್‌ ಆಗಿ ಆಯ್ಕೆ ಆಗಿದ್ದಾರೆ.

ಒಟ್ಟು 6 ಮಂದಿ ಫೈನಲಿಸ್ಟ್‌ಗಳ ಪೈಕಿ ಮೊದಲು 4 ಮಂದಿಗೆ ಫಿನಾಲೆ ಟಿಕೆಟ್ ಸಿಕ್ಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಶಿವಾನಿಗೆ 5ನೇ ಸ್ಪರ್ಧಿಯಾಗಿ ಫಿನಾಲೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಇದೇ ಖುಷಿಯಲ್ಲಿ ಶಿವಾನಿ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

ಈಗ ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಶಿವಾನಿ ಹಾಗೂ ಪವಿತ್ರಾ ಸೇರಿ ಒಟ್ಟು ಆರು ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿದ್ದಾರೆ. ನವೆಂಬರ್ 23ರಂದು ಸರಿಗಮಪ ತಮಿಳು ಸೀಸನ್-5 ಫಿನಾಲೆ ನಡೆಯಲಿದ್ದು, ಯಾವ ಸ್ಪರ್ಧಿಗೆ ಸರಿಗಮಪ ತಮಿಳು ಸೀಸನ್-5ರ ಟ್ರೋಫಿ ಸಿಗಲಿದೆ ಎಂದು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.