ADVERTISEMENT

ರುಕ್ಕು ಆದ ಚಾರು: ಹೊಸ ಧಾರಾವಾಹಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟ ಮೌನ ಗುಡ್ಡೆಮನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2026, 11:38 IST
Last Updated 7 ಫೆಬ್ರುವರಿ 2026, 11:38 IST
<div class="paragraphs"><p>ನಟಿ&nbsp; ಮೌನ ಗುಡ್ಡೆಮನೆ</p></div>

ನಟಿ  ಮೌನ ಗುಡ್ಡೆಮನೆ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡ ಕಿರುತೆರೆಯಲ್ಲಿ ವೀಕ್ಷಕರ ಮನಸಿನಲ್ಲಿ ಅಚ್ಚಾಗಿ ಉಳಿದುಕೊಂಡಿರುವ ಧಾರಾವಾಹಿ ಎಂದರೆ ‘ರಾಮಾಚಾರಿ’. ಇದೇ ಧಾರಾವಾಹಿ​ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಮೌನ ಗುಡ್ಡೆಮನೆ ಇದೀಗ ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ADVERTISEMENT

ಶ್ರೀಘ್ರದಲ್ಲೇ ಜೀ ಕನ್ನಡ ವಾಹಿನಿಯಲ್ಲಿ ಹೊಸ ಕಥೆ ‘ಕೃಷ್ಣ ರುಕ್ಕು’ ಧಾರಾವಾಹಿ ಬರುತ್ತಿದೆ. ಚೂರಾದ ಕನ್ನಡೀಲೂ ನಗು ಕಾಣೋಳು ರುಕ್ಕು.. ಆದರೆ ಕಾಡೋ ನೆನಪಲ್ಲಿ ಬದುಕನ್ನೇ ಚೂರಾಗಿಸಿಕೊಂಡಿರೋನು ಕೃಷ್ಣ. ಇದೇ ಎಳೆಯಲ್ಲೇ ಹೊಸ ಕಥೆ ತೆರೆ ಮೇಲೆ ಬರುವುದಕ್ಕೆ ಸಜ್ಜಾಗಿದ್ದು, ಇದೇ ಧಾರಾವಾಹಿ ಮೂಲಕ ನಟಿ ಮೌನ ಗುಡ್ಡೆಮನೆ ಮತ್ತೆ ಕಂಬ್ಯಾಕ್‌ ಮಾಡಿದ್ದಾರೆ. ಕೃಷ್ಣನ ಪಾತ್ರದಲ್ಲಿ ಅಕ್ಷಯ್ ನಾಯಕ್ ನಟಿಸಿದ್ದಾರೆ.

ಸದ್ಯ ಜೀ ಕನ್ನಡ ವಾಹಿನಿ ಸಾಮಾಜಿಕ ಮಾಧ್ಯಮದಲ್ಲಿ ಕೃಷ್ಣ ರುಕ್ಕು ಧಾರಾವಾಹಿಯ ಪ್ರೋಮೊ ಬಿಡುಗಡೆಯಾಗಿದೆ. ರಾಮಾಚಾರಿ ಧಾರಾವಾಹಿ ಮುಕ್ತಾಯದ ಬಳಿಕ ನಟಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅಭಿಮಾನಿಗಳು ಮತ್ತೆ ಯಾವಾಗ ನಿಮ್ಮನ್ನು ನೋಡುವುದು ಎಂದು ಕಮೆಂಟ್‌ ಮಾಡುತ್ತಲೇ ಇದ್ದರು. ಮತ್ತೆ ತೆರೆ ಮೇಲೆ ಮೌನ ಅವರನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.