ADVERTISEMENT

ಟಿವಿ ಪರದೆಗೆ ಮತ್ತೆ ಮರಳಿದ ರಾಮಾಯಣ ಧಾರಾವಾಹಿ

ಪಿಟಿಐ
Published 16 ಏಪ್ರಿಲ್ 2021, 5:04 IST
Last Updated 16 ಏಪ್ರಿಲ್ 2021, 5:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ರಮಾನಂದ ಸಾಗರ ಅವರ ಜನಪ್ರಿಯ ಮತ್ತು ಪೌರಾಣಿಕ ಧಾರಾವಾಹಿ ರಾಮಾಯಣ ಮತ್ತೆ ಟಿವಿ ಪರದೆಯ ಮೇಲೆ ಮೂಡಿಬರಲು ಸಜ್ಜಾಗಿದೆ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ರಾಮಾಯಣ ಧಾರಾವಾಹಿಯನ್ನು ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿತ್ತು.

ಮಾರ್ಚ್ 2020ರಲ್ಲಿ, ದೂರದರ್ಶನ ವಾಹಿನಿಯಲ್ಲಿ 33 ವರ್ಷದ ಬಳಿಕ ರಾಮಾಯಣ ಧಾರಾವಾಹಿ ಪ್ರಸಾರವಾಗಿ ಜನಮೆಚ್ಚುಗೆ ಗಳಿಸಿತ್ತು. ಪ್ರಸ್ತುತ ಸ್ಟಾರ್ ಭಾರತ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ರಾಮಾಯಣ ಧಾರಾವಾಹಿಯಲ್ಲಿ ಸೀತೆಯ ಪಾತ್ರ ನಿರ್ವಹಿಸಿದ್ದ ನಟಿ ದೀಪಿಕಾ ಚಿಕ್ಲಿಯಾ ಟೋಪಿವಾಲ, ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಮರುಪ್ರಸಾರವಾಗುತ್ತಿರುವ ಧಾರಾವಾಹಿ ಬಗ್ಗೆ ಮಾಹಿತಿ ನೀಡಿದ್ದಾರೆ.

ರಮಾನಂದ ಸಾಗರ ಅವರು ಬರೆದು, ನಿರ್ದೇಶಿಸಿ ನಿರ್ಮಾಣ ಮಾಡಿದ್ದ ಧಾರಾವಾಹಿ, 1987ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಿತ್ತು.

ಅರುಣ್ ಗೋವಿಲ್ ರಾಮನಾಗಿ, ಸುನಿಲ್ ಲಾಹ್ರಿ ಲಕ್ಷ್ಮಣನಾಗಿ ನಟಿಸಿದ್ದರೆ, ಮಂಥರೆಯಾಗಿ ನಟಿ ಲಲಿತಾ ಪವಾರ್, ರಾವಣನಾಗಿ ಅರವಿಂದ ತ್ರಿವೇದಿ ಮತ್ತು ಹನುಮಂತನಾಗಿ ದಾರಾ ಸಿಂಗ್ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.