ADVERTISEMENT

ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 7:25 IST
Last Updated 2 ಜನವರಿ 2026, 7:25 IST
<div class="paragraphs"><p>ದಿಲೀಪ್ ಶೆಟ್ಟಿ,&nbsp;ರಮಿಕಾ ಶಿವು</p></div>

ದಿಲೀಪ್ ಶೆಟ್ಟಿ, ರಮಿಕಾ ಶಿವು

   

ಚಿತ್ರ: ಇನ್‌ಸ್ಟಾಗ್ರಾಂ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ದಿಲೀಪ್​ ಶೆಟ್ಟಿ ಹಾಗೂ ನಟಿ ಖುಷಿ ಶಿವು ಅವರು ಹೊಸ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ನಟಿ ರಮಿಕಾ ಶಿವು ಅವರು ತಮ್ಮದೇ ಆದ ಹೊಸ ಹೊಟೇಲ್ ಉದ್ಯಮವನ್ನು ಆರಂಭಿಸಿದ್ದ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಹೊಸ ಅಧ್ಯಾಯ ಆರಂಭ. ನಮ್ಮ ಹೊಸ ಹೋಟೆಲ್ ಉದ್ಯಮದ ಆರಂಭಿಸಲು ಹೆಮ್ಮೆಯಾಗುತ್ತಿದೆ. 'ದೊಡ್ಡಮನೆ ಊಟ-ಮನದ ಹಿತದ ಊಟ', ಇದು ನನ್ನ ಜೀವನದ ವಿಶೇಷ ಮೈಲಿಗಲ್ಲು. ಇದರ ಬಗ್ಗೆ ಮಾಹಿತಿ ನೀಡಲು ನಿಜವಾಗಿಯೂ ಉತ್ಸುಕರಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲದೊಂದಿಗೆ ರುಚಿ ನೀಡುವ ಭರವಸೆ ನೀಡುತ್ತೇವೆ. ಕೃತಜ್ಞತೆ, ಉತ್ಸಾಹಭರಿತ ಪ್ರಯಾಣಕ್ಕೆ ಸಿದ್ಧವಾಗಿದ್ದೇವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ನೀನಾದೆ ನಾ ಧಾರಾವಾಹಿಯಲ್ಲಿ ವಿಕ್ರಮ್ ಪಾತ್ರದಲ್ಲಿ ನಟ ದಿಲೀಪ್​ ಶೆಟ್ಟಿ ನಟಿಸಿದ್ದರು.​ ವೇದಾ ಪಾತ್ರದಲ್ಲಿ ನಟಿ ಖುಷಿ ಶಿವು ಕಾಣಿಸಿಕೊಂಡಿದ್ದರು. ಈ ಜೋಡಿ ಧಾರಾವಾಹಿಯಲ್ಲಷ್ಟೇ ಅಲ್ಲದೇ ನಿಜ ಜೀವನದಲ್ಲೂ ಆತ್ಮೀಯರಾಗಿದ್ದಾರೆ. ಇತ್ತೀಚೆಗೆ ನಟಿ ಖುಷಿ ಶಿವು ಬದಲು ರಮಿಕಾ ಶಿವು ಎಂದು ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.