ADVERTISEMENT

15 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿದ ರಾಜಕಾರಣಿ, ನಟಿ ಸ್ಮೃತಿ ಇರಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2025, 16:06 IST
Last Updated 8 ಜುಲೈ 2025, 16:06 IST
   

ನವದೆಹಲಿ: 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ‘ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ರಾಜಕಾರಣಿ ಮತ್ತು ನಟಿ ಸ್ಮೃತಿ ಇರಾನಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

2000ರಿಂದ 2008ರವರೆಗೆ ಖಾಸಗಿ ವಾಹಿನಿವೊಂದರಲ್ಲಿ ಪ್ರಸಾರವಾದ ಈ ಧಾರವಾಹಿ ವ್ಯಾಪಾರಸ್ಥ ಕುಟುಂಬದಲ್ಲಿನ ಆಗುಹೋಗುಗಳನ್ನು ಚಿತ್ರಿಸಲಾಗಿತ್ತು. ಇತ್ತೀಚೆಗೆ ಮೆರೂನ್ ಸೀರೆಯಲ್ಲಿ ಇರಾನಿ ಕಾಣಿಸಿಕೊಂಡ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹರಿದಾಡಿತ್ತು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು ನಿಮ್ಮೆಲ್ಲರನ್ನೂ ಮತ್ತೆ ಭೇಟಿಯಾಗುವ ಸಮಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ADVERTISEMENT

'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' (Kyunki Saas Bhi Kabhi Bahu Thi) ಕೇವಲ ಒಂದು ಪಾತ್ರವಾಗಿರಲಿಲ್ಲ. ಬದಲಿಗೆ ಭಾವನೆಗಳು, ನೆನಪು, ಆಚರಣೆ. ಕುಟುಂಬ ಎಲ್ಲವನ್ನೂ ಒಟ್ಟಿಗೆ ತೆರೆಮೇಲೆ ಕಟ್ಟಿಕೊಡುವ ಎಲ್ಲರನ್ನೂ ಒಗ್ಗೂಡಿಸುವ ವೇದಿಕೆಯಾಗಿತ್ತು. ತುಳಸಿ ಪಾತ್ರವು ಸ್ವಂತ ಕುಟುಂಬದ ಒಬ್ಬಳನ್ನಾಗಿ ಪ್ರೇಕ್ಷಕರು ಸಂಭ್ರಮಿಸಿದರು ಮತ್ತು ತನ್ನ ಪಾತ್ರವನ್ನು ಸ್ವೀಕರಿಸಿದರು ಎಂದು ಇರಾನಿ ಹೇಳಿದ್ದಾರೆ.

1,800ಕ್ಕೂ ಹೆಚ್ಚು ಎಪಿಸೋಡ್ ಹೊಂದಿದ್ದ ಈ ಧಾರಾವಾಹಿ 25 ವರ್ಷಗಳನ್ನು ಪೂರೈಸಿತ್ತು. ಇದೀಗ ಹೊಸ ಅವತಾರದಲ್ಲಿ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ನಿಮ್ಮ ಮುಂದೆ ಬರುತ್ತಿದೆ.

ಕಳೆದ 15 ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದ ಸ್ಮೃತಿ ಇರಾನಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

ಇದೇ ಜುಲೈ 29ರಿಂದ ಸ್ಟಾರ್ ಪ್ಲಸ್ ಮತ್ತು ಜಿಯೊ ಹಾಟ್‌ಸ್ಟಾರ್‌ನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.