ADVERTISEMENT

ಸಂಕಲನ | ಮೋದಿ ಸರ್ಕಾರ್ 2.0– ಇಲ್ಲಿದೆ ಈವರೆಗಿನ ಸಮಗ್ರ ಅಪ್‌ಡೇಟ್ಸ್

​ಪ್ರಜಾವಾಣಿ ವಾರ್ತೆ
Published 31 ಮೇ 2019, 5:02 IST
Last Updated 31 ಮೇ 2019, 5:02 IST
   

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡನೇ ಬಾರಿಗೆ ನರೇಂದ್ರ ಮೋದಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಸಂಪುಟ ಸೇರಿದವರ ಪರಿಚಯ ಮತ್ತು ಇದು ರಾಜಕಾರಣದ ಮೇಲೆ ಬೀರುವ ಪರಿಣಾಮಗಳನ್ನು‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಗಳ ಮೂಲಕಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

25 ಮಂದಿ ಸಂಪುಟ ದರ್ಜೆ ಸಚಿವರೂ ಸೇರಿದಂತೆ 57 ಮಂದಿ ಸಚಿವರು ಗುರುವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಾರಿಗೆ ಯಾವ ಖಾತೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿ ನಿರ್ಧಾರವಾಗಿಲ್ಲ. ಶುಕ್ರವಾರ ನಡೆಯುವ ಸಭೆಯಲ್ಲಿ ಖಾತೆ ಹಂಚಿಕೆಯಾಗುವ ಸಂಭವ ಇದೆ.

ADVERTISEMENT

ಮೋದಿ ಅವರು ತಮ್ಮ ಎರಡನೇ ಅವಧಿಗೆ ಸಂಪುಟ ರಚಿಸುವ ನಿಟ್ಟಿನಲ್ಲಿ ಎಲ್ಲ ಸಂಪ್ರದಾಯಗಳನ್ನು ಮುರಿದು ಮುನ್ನಡೆದಿದ್ದಾರೆ. ಜಾತಿ ರಾಜಕೀಯವನ್ನು ಮೀರಿಸಿ ಅನೇಕ ಕಡೆಗಳಲ್ಲಿ ಚುನಾವಣೆಯನ್ನು ಗೆದ್ದಿರುವ ಮೋದಿ ಅವರು ಸಂಪುಟ ರಚನೆಯಲ್ಲೂ ಜಾತಿಗೆ ಅಷ್ಟು ಪ್ರಾಧಾನ್ಯ ನೀಡಲಿಲ್ಲ.

ಉಡುಪಿ–ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ್‌, ಹಾವೇರಿಯ ಶಿವಕುಮಾರ್ ಉದಾಸಿ, ತುಮಕೂರಿನ ಜಿ.ಎಸ್‌. ಬಸವರಾಜ್‌, ಕೊಪ್ಪಳದ ಕರಡಿ ಸಂಗಣ್ಣ ಪೈಕಿ, ಒಬ್ಬಿಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ತೀವ್ರ ಹಿನ್ನಡೆ ಆದಂತಾಗಿದೆ.

‘ಸಂವಿಧಾನ ಬದಲಿಸುವ ಸಂಬಂಧ ನೀಡಿದ್ದ ಹೇಳಿಕೆ ಪಕ್ಷ ಸಂಘಟನೆಗೆ ತೀವ್ರ ಹೊಡೆತಕೊಟ್ಟಿತು. ಪರಿಶಿಷ್ಟ ಮೋರ್ಚಾ ಕಾರ್ಯಕರ್ತರು ರಾಜ್ಯ ಘಟಕದ ಸಭೆಯಲ್ಲಿ ನೇರವಾಗಿ ಅನಂತಕುಮಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು’.

ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣಗಳು ಇಲ್ಲಿ ದಾಖಲಾಗಿವೆ.

ಪ್ರಮಾಣವಚನ ಸಮಾರಂಭ ಎಲ್ಲಿ ನಡೆಯುತ್ತೆ? ಹೇಗಿರಲಿದೆ? ಸಾಕ್ಷಿಯಾಗಲಿರುವಅತಿಥಿಗಳುಯಾರೆಲ್ಲ?

ಅವರೇ ಅಮಿತ್‌ಭಾಯ್‌ ಅನಿಲ್‌ಚಂದ್ರ ಷಾ. ನರೇಂದ್ರ ಮೋದಿ ಅವರ ಬಲಗೈ ಬಂಟ. ಒಂದು ಕಾಲದಲ್ಲಿ ಷೇರು ದಲ್ಲಾಳಿಯಾಗಿದ್ದ ಅಮಿತ್‌ ಷಾ, ಇಂದು ಬಿಜೆಪಿಯನ್ನು ಗೆಲುವಿನ ದಡಕ್ಕೆ ಸೇರಿಸಿದ ಯಶಸ್ವಿ ನೇತಾರ.

ನರೇಂದ್ರ ದಾಮೋದರ­ದಾಸ್‌ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಮೇ 26, 2014ರಂದು ಮೊದಲ ಬಾರಿಗೆಪ್ರಮಾಣ­ವಚನ ಸ್ವೀಕರಿಸಿ­ದರು.

ಸದಾನಂದ ಗೌಡ, ಸುರೇಶ ಅಂಗಡಿ, ಜೋಶಿಗೆ ಒಲಿದ ಸಚಿವ ಸ್ಥಾನ
ರಾಜ್ಯದ ಬಿಜೆಪಿ ಸಂಸದರಾದ ಡಿ.ವಿ.ಸದಾನಂದಗೌಡ, ಸುರೇಶ ಅಂಗಡಿ, ಪ್ರಹ್ಲಾದ್‌ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಸಂಸದ ಪ್ರಹ್ಲಾದ ಜೋಶಿಗೆ ಒಲಿದ ಸಚಿವ ಸ್ಥಾನ
ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಹ್ಲಾದ ಜೋಶಿ ಅವರು ಪ್ರಧಾನಿ ನರೇಂದ್ರ ಮೊದಿ ಅವರ ಸಂಪುಟದಲ್ಲಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ.

ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಒಲಿದ ಸಚಿವ ಸ್ಥಾನ
ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಸುರೇಶ ಅಂಗಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಲೋಕಸಭಾ ಚುನಾವಣೆ ಮುಗಿದ ನಂತರ ಮೊದಲ ಬಾರಿ ಸ್ವಕ್ಷೇತ್ರದಲ್ಲಿ ಮೋದಿ ಮಾಡಿದ ಭಾಷಣ ದೇಶದ ಗಮನ ಸೆಳೆದಿತ್ತು.

ಚುನಾವಣೆಯಲ್ಲಿ ಜಾತಿ, ಕಾರ್ಯಕರ್ತ ಪಡೆ ಮತ್ತು ಮೋದಿ ಮೋಡಿಯ ಸಂಯೋಜನೆ ಬಿಜೆಪಿಯ ಕಾರ್ಯತಂತ್ರವಾಗಿತ್ತು.ಬಿಜೆಪಿ ಹೇಗೆ ಕೆಲಸ ಮಾಡಿತು ಎಂಬುದರ ಒಂದು ನೋಟ ಇಲ್ಲಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ‘ನಾನ್ ಪೊಲಿಟಿಕಲ್’‌ಸಂದರ್ಶನದಲ್ಲಿ ಮಮತಾ ಬ್ಯಾನರ್ಜಿ ಬಗ್ಗೆ ಮೋದಿ ಏನೆಲ್ಲಾ ಮಾತಾಡಿದ್ದರು?

ದೇಶವ್ಯಾಪಿ ಮೋದಿ ಅಲೆಯ ಜನಪ್ರಿಯತೆಯ ಮೂಲ ಬೇರುಗಳನ್ನು ಹುಡುಕಿದರೆ, ನಿಸ್ಸಂಶಯವಾಗಿ ಅದು ಮೌಖಿಕತೆ. ಇದನ್ನು ಆಧುನಿಕ ಮೌಖಿಕತೆಯೆಂತಲೂ, ನವಮೌಖಿಕತೆಯೆಂತಲೂ ಕರೆಯಬಹುದು.

ರವೀಂದ್ರ ಭಟ್:ವಿರೋಧಿಗಳುಟೀಕೆ ಮಾಡಿದಷ್ಟೂ ಮೋದಿಗೆ ಇನ್ನಷ್ಟ ಬಲ ಸಿಕ್ತು ಅಂತೀರಾ?

ಅರುಣ್:ಹೌದು, ಜನರಿಗೆ ಅವರು ಟೀಕಿಸಿದ ರೀತಿ ಇಷ್ಟವಾಗಲಿಲ್ಲ.

‘ದೇಶಕ್ಕೆ ಈಗ ಫಲಿತಾಂಶ ಗೊತ್ತಾಗಿದೆ. ಆದರೆ ಇಂಥ ಫಲಿತಾಂಶ ಬಂದಿದ್ದೇಕೆ...?’ದೇಶ ಸುತ್ತಿ ಜನರನಾಡಿಮಿಡಿತ ಅರಿತ ಅನುಭವಿ ಪತ್ರಕರ್ತರಾದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕರವೀಂದ್ರ ಭಟ್ಮತ್ತು‘ಡೆಕ್ಕನ್ ಹೆರಾಲ್ಡ್‌’ಡೆಪ್ಯುಟಿ ಎಡಿಟರ್‌ಬಿ.ಎಸ್.ಅರುಣ್ಈ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿದ್ದಾರೆ.

ಹಿಂದುತ್ವ ಪ್ರತಿಪಾದನೆ, ರಾಷ್ಟ್ರರಕ್ಷಣೆಯನ್ನು ಮುನ್ನೆಲೆಗೆ ತಂದಿದ್ದು ಬಿಜೆಪಿಯ ಮುನ್ನಡೆಗೆ ಮುಖ್ಯ ಕಾರಣ ಅನ್ನಿಸುತ್ತೆ ಅಲ್ವಾ?

ಯಾವುದೇ ರಾಜ್ಯಕ್ಕೆ ಹೋದರೂ ಸ್ಥಳೀಯ ಭಾಷೆಯಲ್ಲಿ ಭಾಷಣ ಆರಂಭಿಸುವುದು ಮೋದಿ ರೂಢಿ. ಕನ್ನಡದಲ್ಲಿ ಮೋದಿ ಆಡಿದ ಮಾತುಗಳ ವಿಡಿಯೊ ಸಂಕಲನ ಇಲ್ಲಿದೆ ನೋಡಿ.

2013, 2016, 2019ರಲ್ಲಿ ದೇಶದ ವಿವಿಧೆಡೆ ತಮ್ಮ ಭಾಷಣಗಳಲ್ಲಿ ಮೋದಿ ಪ್ರಸ್ತಾಪಿಸಿದ ವಿಚಾರಗಳವಿಡಿಯೊ ಸಂಕಲನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.