ADVERTISEMENT

ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2022, 8:44 IST
Last Updated 7 ಜೂನ್ 2022, 8:44 IST
ವಿಶ್ವ ಆಹಾರ ಸುರಕ್ಷತಾ ದಿನ
ವಿಶ್ವ ಆಹಾರ ಸುರಕ್ಷತಾ ದಿನ   

ವಿಶ್ಚಸಂಸ್ಥೆ: ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ಪ್ರತಿ ವರ್ಷವೂವಿಶ್ವ ಆಹಾರ ಸುರಕ್ಷತಾ ದಿನವನ್ನು ಒಂದೊಂದುಧ್ಯೇಯವಾಕ್ಯದ ಅಡಿಯಲ್ಲಿ ಆಚರಣೆ ಮಾಡುವುದು ವಿಶೇಷ. ಕಳೆದ ವರ್ಷ ‘ಉತ್ತಮ ನಾಳೆಗಾಗಿ ಇಂದು ಸುರಕ್ಷಿತ ಆಹಾರ‘ ಎನ್ನುವ ಥೀಮ್‌ ಅಡಿಯಲ್ಲಿ ಆಚರಣೆ ಮಾಡಲಾಗಿತ್ತು. ಈ ಸಲ ‘ಸುರಕ್ಷಿತ ಆಹಾರ, ಉತ್ತಮ ಆರೋಗ್ಯ‘ ಎಂಬ ಪರಿಕಲ್ಪನೆಯಲ್ಲಿ ಆಚರಣೆ ಮಾಡಲಾಗುತ್ತಿದೆ.

ಸುರಕ್ಷಿತವಲ್ಲದ ಆಹಾರದಿಂದ ಬರಬಹುದಾದ ಆಪಾಯಗಳ ಕುರಿತು ತಿಳಿವಳಿಕೆ, ಅವುಗಳನ್ನು ಪತ್ತೆಹಚ್ಚುವುದು, ಆಹಾರ ಸುರಕ್ಷತೆಗೆ ಕೊಡುಗೆ ನೀಡುವುದು, ಆರೋಗ್ಯ ಕುರಿತು ಈ ದಿನದಂದು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಗಮನ ಸೆಳೆಯುತ್ತದೆ.

ADVERTISEMENT

ಉತ್ತಮ ಮತ್ತು ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ದೀರ್ಘಾವಧಿಗೆ ಆಗುವ ಲಾಭಗಳು ಮತ್ತು ಆರೋಗ್ಯ ಪ್ರಯೋಜನಗಳ ಕುರಿತು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಅಸುರಕ್ಷಿತ ಮತ್ತು ಕೃತಕ ಆಹಾರ ಬಳಕೆಯಿಂದ ಬರುವ ಅಪಾಯಗಳ ಕುರಿತು ಜಾಗತಿಕವಾಗಿ ಅಭಿಯಾನ, ವಿಚಾರ ಸಂಕಿರಣಗಳು, ಚರ್ಚೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದುಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.