
ಮೀನು ಸಾಂಬಾರ್ ಕರ್ನಾಟಕದ ಕರಾವಳಿ, ಮಲೆನಾಡು ಜನರ ನೆಚ್ಚಿನ ಖಾದ್ಯವಾಗಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಮೀನಿನ ಸಾಂಬರ್ ಮಾಡುತ್ತಾರೆ. ಆದರೆ, ಮಲೆನಾಡಿನವರು ತಯಾರಿಸುವ ಬಂಗುಡೆ ಮೀನಿನ ಸಾಂಬರ್ ಮಾಡುವ ವಿಧಾನ ಹೇಗೆ ಎಂದು ನೋಡೋಣ.
ಬಂಗುಡೆ ಮೀನು ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು
1/2 ಅಥವಾ 1 ಕೆಜಿ ಹಸಿ ಮೀನು
2 ಹಿಡಿ ಮೆಣಸಿನಕಾಯಿ
2 ಈರುಳ್ಳಿ
2 ಟಮೊಟೊ
ಅರ್ಧ ಕಪ್ ಕೊತ್ತಂಬರಿ ಕಾಳು
ಕಾಲು ಚಮಚ ಜೀರಿಗೆ
ಅರ್ಧ ಚಮಚ ಕಾಳು ಮೆಣಸು
ಅರ್ಧ ಚಮಮ ಶುಂಠಿ
4–5 ಎಸಳು ಬೆಳ್ಳುಳ್ಳಿ
4–5 ಮೆಂತ್ಯೆ ಕಾಳು
ನಿಂಬೆ ಹಣ್ಣು ಅಥವಾ ಹುಣಸೆ ಹಣ್ಣು
1/2 ಚಮಚ ಅರಶಿಣ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ
ಮಾಡುವ ವಿಧಾನ: ಮೊದಲು ಮೀನನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಂತರ, ಈರುಳ್ಳಿ, ಟೊಮೆಟೊವನ್ನು ತೊಳೆದು ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ ಕಾಳು, ಜೀರಿಗೆ, ಕಾಳು ಮೆಣಸು, ಮೆಂತ್ಯೆ ಕಾಳುನ್ನು ಹುರಿದುಕೊಳ್ಳಿ.
ಬಿಸಿ ಆರಿದ ಬಳಿಕ ಹುರಿದುಕೊಂಡ ಸಾಮಾಗ್ರಿಗಳ ಜತೆ ಶುಂಠಿ, ಬೆಳ್ಳುಳ್ಳಿ ಅರಶಿಣ ಸೇರಿಸಿಕೊಂಡು ರುಬ್ಬಿಕೊಳ್ಳಿ.
ನಂತರ ನೀವು ಮಣ್ಣಿನ ಮಡಿಕೆ ಅಡುಗೆಗೆ ಬಳಸುತ್ತಿದ್ದರೆ ಅದನ್ನೆ ಮೀನು ಸಾಂಬಾರ್ ಮಾಡಲು ಬಳಸಿ. ಇಲ್ಲವಾದಲ್ಲಿ ಮನೆಯಲ್ಲಿರುವ ಪಾತ್ರೆಯಲ್ಲಿಯೂ ಮಾಡಬಹುದು.
ಅಡುಗೆಯಲ್ಲಿ ಎಣ್ಣೆ ಅಂಶ ಬೇಕಿದ್ದರೆ: ಮಡಕೆ ಅಥವಾ ಪಾತ್ರೆಯಲ್ಲಿ ಅರ್ಧ ಚಮಚ ಅಡುಗೆ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಟೊಮೆಟೊವನ್ನು ಹಾಗೂ ಅದಕ್ಕೆ ರುಬ್ಬಿಕೊಂಡ ಖಾರವನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು, ಉಪ್ಪು, ಹುಳಿ, ಹಾಗೂ ಶುಚಿಗೊಳಿಸಿದ ಮೀನು ಹಾಕಿ ಕುದಿಸಿಕೊಳ್ಳಿ.
ಅಡುಗೆಯಲ್ಲಿ ಎಣ್ಣೆ ಅಂಶ ಬೇಡವಾದರೆ: ಒಂದು ಮಡಿಕೆ ಅಥವಾ ಪಾತ್ರೆಗೆ ರುಬ್ಬಿಕೊಂಡ ಖಾರ, ಉಪ್ಪು , ಹುಳಿ, ನೀರು ಹಾಕಿ ಮಿಶ್ರಣ ಮಾಡಿ ಐದು ನಿಮಿಷ ಕುದಿಸಿಕೊಳ್ಳಿ. ಕುದಿ ಬಂದ ನಂತರ ತೊಳೆದಿಟ್ಟುಕೊಂಡಿರುವ ಮೀನು ಹಾಕಿ ಬೇಕಾದ ಹದಕ್ಕೆ ಮೀನು ಸಾಂಬಾರ್ ಕುದಿಸಿಕೊಳ್ಳಿ .
ನಂತರ ಅನ್ನ ಅಥವಾ ರೊಟ್ಟಿ ಜತೆ ಸವಿಯಿರಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.