ಒಂದು ಕೆಲಸವನ್ನು ಪೂರ್ಣಗೊಳಿಸುವಾಗ ಹಲವು ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಎದುರಿಸಿ ಮುನ್ನೆಡೆದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಒಂದು ಕೆಲಸವನ್ನು ಪೂರ್ಣಗೊಳಿಸಲು ಆತ್ಮವಿಶ್ವಾಸ ಮುಖ್ಯ ಎಂದು ಮನೋವಿಜ್ಞಾನ ಹೇಳುತ್ತದೆ. ಹಾಗಾದರೆ ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಸಕಾರಾತ್ಮಕ ಚಿಂತನೆ:
ಮಗುವಿನಲ್ಲಿ ‘ನನ್ನಿಂದ ಸಾಧ್ಯ’ ಎಂಬ ಮನೋಭಾವ ಬೆಳೆಸಬೇಕು. ಪ್ರತಿಯೊಂದು ಪ್ರಯತ್ನವನ್ನು ಯಶಸ್ಸಿನ ಹೆಜ್ಜೆ ಎಂದು ಮಕ್ಕಳಿಗೆ ಮನದಟ್ಟು ಮಾಡಬೇಕು. ಇದು ಆತ್ಮವಿಶ್ವಾಸ ಬೆಳೆಸುವ ಮೊದಲ ಹಂತ.
ಪ್ರಶಂಸೆ ಮತ್ತು ಪ್ರೋತ್ಸಾಹ:
ಮಗು ಸಣ್ಣ ಸಾಧನೆ ಮಾಡಿದರೂ ಪ್ರಶಂಸಿಸಬೇಕು. ಪ್ರೋತ್ಸಾಹದ ಮಾತುಗಳು ಮನಸ್ಸಿಗೆ ಬಲ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ಸಣ್ಣ ಗುರಿಗಳು ಮತ್ತು ಯಶಸ್ಸಿನ ಅನುಭವ:
ಮಗುವಿಗೆ ಸಣ್ಣ ಗುರಿಗಳನ್ನು ನೀಡಿ, ಅದನ್ನು ಸಾಧಿಸಿದಾಗ ಅಭಿನಂದಿಸಿ. ಈ ಅನುಭವದಿಂದ ಮಗುವಿನಲ್ಲಿ ಆತ್ಮವಿಶ್ವಾಸ ಸ್ವಾಭಾವಿಕವಾಗಿಯೆ ಬೆಳೆಯುತ್ತದೆ.
ಆಟ ಮತ್ತು ಚಟುವಟಿಕೆಗಳ ಮೂಲಕ ಕಲಿಕೆ:
ರೋಲ್ ಪ್ಲೇ, ಆಟಗಳು, ಗುಂಪು ಚಟುವಟಿಕೆಗಳ ಮೂಲಕ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ಅಭಿವ್ಯಕ್ತಿಯನ್ನು ಬೆಳೆಸಬಹುದು. ಇದು ಸಾಮಾಜಿಕ ಆತ್ಮವಿಶ್ವಾಸಕ್ಕೂ ಸಹಾಯಮಾಡುತ್ತದೆ.
ಸ್ವ-ಮಾತು ಅಭ್ಯಾಸ:
ಮಕ್ಕಳಿಗೆ ದಿನವೂ ತಮ್ಮ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಹೇಳುವ ಅಭ್ಯಾಸ ಮಾಡಿಸಬೇಕು. ಅಂದರೆ, ‘ನಾನು ಉತ್ತಮವಾಗಿ ಕಲಿಯುತ್ತಿದ್ದೇನೆ’, ‘ನಾನು ಬಲಿಷ್ಠ’ ಇತ್ಯಾದಿಗಳನ್ನು ಮಗುವಿಗೆ ಹೇಳಬೇಕು. ಈ ಅಭ್ಯಾಸ ಮಗು ಮನಸ್ಸಿಗೆ ಪ್ರೇರಣೆ ನೀಡುತ್ತದೆ.
ಸೃಜನಾತ್ಮಕ ಅಭಿವ್ಯಕ್ತಿ
ಚಿತ್ರಕಲೆ, ನೃತ್ಯ, ಸಂಗೀತ, ನಾಟಕ ಇವುಗಳಿಂದ ಮಗು ತನ್ನ ಭಾವನೆಗಳನ್ನು ಹೊರಹಾಕಲು ಸಾಧ್ಯ. ಇದು ಒತ್ತಡ ಕಡಿಮೆಮಾಡಿ, ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.