ADVERTISEMENT

Health Tips: ಚಳಿಯಿಂದ ದೇಹವನ್ನು ಬೆಚ್ಚಗಿಡಲು ಇಲ್ಲಿದೆ ಸರಳ ಉಪಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 10:43 IST
Last Updated 3 ಡಿಸೆಂಬರ್ 2025, 10:43 IST
   

ಚಳಿಗಾಲದಲ್ಲಿ ತಾಪಮಾನದ ಬದಲಾವಣೆಯಿಂದಾಗಿ ವೈರಾಣುಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇದರಿಂದ ಚರ್ಮ ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಈ ಸಮಯದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಯುರ್ವೇದ ತಜ್ಞರು ಕೆಲವು ಸಲಹೆ ನೀಡಿದ್ದಾರೆ.

ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಈ ವೇಳೆ ನಿರಂತರ ಸೀನುವಿಕೆ, ಅಲರ್ಜಿ ಕೆಮ್ಮು, ಕೈ – ಕಾಲು ಒಡೆಯುತ್ತವೆ.

ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಹೇಗೆ?

ADVERTISEMENT
  • ಅನ್ನದ ಜತೆ 1–2 ಚಮಚ ತುಪ್ಪವನ್ನು ಸೇರಿಸಿ ಊಟ ಸೇವಿಸಬೇಕು

  • ದಿನನಿತ್ಯ 2–4 ಲೀಟರ್ ಬೆಚ್ಚಗಿನ ನೀರು ಕುಡಿಯಬೇಕು

  • ತರಕಾರಿ, ಸೊಪ್ಪು, ಮೊಳಕೆ ಕಾಳು ಹೆಚ್ಚಾಗಿ ಸೇವಿಸಬೇಕು

  • ಶುಂಠಿ ಮತ್ತು ಜೀರಿಗೆ ಕಷಾಯದ ಜತೆ ಅರಿಶಿಣ ಪುಡಿ ಸೇರಿಸಿ ಕುಡಿಯಬೇಕು

  • ತಂಪು ಪಾನಿಯ, ಐಸ್‌ಕ್ರೀಂ ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.

  • ಬೆಚ್ಚಗಿನ ಉಡುಪು ಧರಿಸುವುದು

  • ಮಾಸ್ಕ್ ಧರಿಸುವುದು

  • ಸರಿಯಾದ ವೇಳೆಗೆ ಊಟ ಸೇವನೆ

  • ಒಣ ಹಣ್ಣುಗಳ ಸೇವನೆ

  • ಪ್ರತಿನಿತ್ಯ ವ್ಯಾಯಮ ಮಾಡುವುದರಿಂದ ಚಳಿಗಾಲದಲ್ಲಿ ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.