ADVERTISEMENT

51ನೇ ವಯಸ್ಸಿನಲ್ಲೂ ಹೃತಿಕ್ ರೋಷನ್ ಫಿಟ್ ಆಗಿರುವುದು ಹೇಗೆ? ಓದಿ ಒಂದು ತಟ್ಟೆಯ ಕಥೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2026, 11:12 IST
Last Updated 6 ಜನವರಿ 2026, 11:12 IST
<div class="paragraphs"><p>ನಟ&nbsp;ಹೃತಿಕ್ ರೋಷನ್</p></div>

ನಟ ಹೃತಿಕ್ ರೋಷನ್

   

ಚಿತ್ರ: ಇನ್‌ಸ್ಟಾಗ್ರಾಂ

ಬಾಲಿವುಡ್ ಜನಪ್ರಿಯ ನಟ ಹೃತಿಕ್ ರೋಷನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅದ್ಭುತ ಡ್ಯಾನ್ಸ್‌ ಮತ್ತು ಅಭಿನಯದಿಂದ ಮೋಡಿ ಮಾಡುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಫಿಟ್‌ನೆಸ್ ವಿಚಾರದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಟ ಹೃತಿಕ್ ರೋಷನ್‌ ತಮ್ಮ ಫಿಟ್‌ನೆಸ್ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾ ಇರುತ್ತಾರೆ.

ADVERTISEMENT

ಹೃತಿಕ್ ರೋಷನ್

ಇದೀಗ ನಟ ಹೃತಿಕ್ ರೋಷನ್ ತಮ್ಮ ಆಹಾರ ಮತ್ತು ವ್ಯಾಯಾಮದ ದಿನಚರಿಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅಲ್ಲದೇ 51ನೇ ವಯಸ್ಸಿನಲ್ಲೂ ಹೃತಿಕ್ ರೋಷನ್ ಇಷ್ಟೊಂದು ಫಿಟ್ ಆಗಿರುವುದು ಹೇಗೆ ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ನಟ ‘ಹೊಸ ಧ್ಯೇಯವಾಕ್ಯ. ಕಡಿಮೆ ತಿನ್ನುವುದು ಉತ್ತಮ. ಆದರೆ ತಟ್ಟೆಯನ್ನು ದೊಡ್ಡದಾಗಿ ಕಾಣುವಂತೆ ಮಾಡಿ’ ಎಂದು ಬರೆದುಕೊಂಡಿದ್ದಾರೆ.

ಹೃತಿಕ್ ರೋಷನ್ ಹಂಚಿಕೊಂಡ ಫೋಟೊದಲ್ಲಿ ಒಂದು ಬಟ್ಟಲಿನಲ್ಲಿ ವಿವಿಧ ಬಗೆಯ ತರಕಾರಿ ಹಾಗೂ ಸಲಾಡ್‌ ಜೊತೆಗೆ ಚಿಕನ್ ಟಿಕ್ಕಾದಿಂದ ಕೂಡಿದೆ. ಹುರಿದ ಕುಂಬಳಕಾಯಿ, ಕ್ಯಾರೆಟ್, ಬ್ರೊಕೋಲಿ, ಹುರಿದ ಬೆಂಡೆಕಾಯಿ, ಕೆಂಪು ದೊಡ್ಡ ಮೆಣಸಿನಕಾಯಿ, ಚಿಕನ್ ಟಿಕ್ಕಾ, ಹಸಿರು ಬೀನ್ಸ್, ಹೆಸರುಕಾಳು ಮತ್ತು ಸಲಾಡ್‌ನಿಂದ ತುಂಬಿದೆ. ಮತ್ತೊಂದು ಫೋಟೊದಲ್ಲಿ ಬೀಟ್ರೂಟ್ ಹಾಗೂ ಬಾಳೆಹಣ್ಣು ಇರುವುದು ಕಾಣಿಸಿದೆ.

ನಟ ಹೃತಿಕ್ ಅವರ ತಟ್ಟೆಯಲ್ಲಿ ದೇಹಕ್ಕೆ ಬೇಕಾಗಿರುವ ಅಗತ್ಯವಿರುವ ಪ್ರೋಟೀನ್, ಫೈಬರ್ ಮತ್ತು ಜೀವಸತ್ವಗಳನ್ನು ಒಳಗೊಂಡಿವೆ. ಬಾಳೆಹಣ್ಣು ಪೊಟ್ಯಾಸಿಯಮ್‌ನ ಸಮೃದ್ಧ ಮೂಲವಾಗಿದ್ದು, ಜೀರ್ಣಕ್ರಿಯೆ ಮತ್ತು ರೋಗನಿರೋಧಕ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ. ಇದು ಸಮತೋಲಿತ ಊಟ ಹೇಗಿರುತ್ತದೆ ಎಂಬುದಕ್ಕೆ ಹೃತಿಕ್ ರೋಷನ್ ಅವರ ತಟ್ಟೆ ಒಂದು ಅದ್ಭುತ ಉದಾಹರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.