
ಗೊರಕೆ ಅನೇಕರಿಗೆ ಕಾಡುವ ದೊಡ್ಡ ಸಮಸ್ಯೆಯಾಗಿದೆ. ನಿದ್ದೆಯ ಸಮಯದಲ್ಲಿ ಬಾಯಿ ಮತ್ತು ಮೂಗಿನ ಮೂಲಕ ಗಾಳಿಯ ಹರಿವು ಭಾಗಶಃ ಅಡಚಣೆಯಾದಾಗ ಇದು ಸಂಭವಿಸುತ್ತದೆ. ಗಂಟಲಿನ ಅಂಗಾಂಶಗಳು ಕಂಪಿಸಿದಾಗ ವಿಶಿಷ್ಟವಾದ ಧ್ವನಿಯೊಂದು ಉಂಟಾಗುತ್ತದೆ. ಅನೇಕ ಜನರು ಗೊರಕೆಯನ್ನು ಕಿರಿಕಿರಿ ಎಂದಷ್ಟೆ ಪರಿಗಣಿಸುತ್ತಾರೆ. ಆದರೆ ಇದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತದೆ. ವಿಪರೀತ ಗೊರಕೆಗೆ ಕಾರಣ, ಹಾಗೂ ಇದರ ನಿಯಂತ್ರಣಕ್ಕೆ ಪರಿಹಾರ ಕ್ರಮಗಳ ಬಗ್ಗೆ ಆಯುರ್ವೇದ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಾರಣವೇನು?
ಮೂಗು ಹಾಗೂ ಅಲರ್ಜಿ ಸಮಸ್ಯೆಗಳು
ಬೊಜ್ಜು, ತೂಕ ಹೆಚ್ಚಳ
ಧೂಮಪಾನ, ಮದ್ಯಪಾನ ಸೇವನೆ
ಅಂಗಾತ ಮಲಗುವುದರಿಂದ ನಾಲಿಗೆ ಮತ್ತು ಮೃದು ಅಂಗುಳದ ಭಾಗ ಗಂಟಲಿನ ಕಡೆಗೆ ವಾಲಿಕೊಳ್ಳುತ್ತವೆ. ಇದು ಕೂಡ ಗೊರಕೆಗೆ ಕಾರಣವಾಗಬಹುದು.
ವಯಸ್ಸಾದಂತೆ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಮುಖ್ಯವಾಗಿ ಗಂಟಲಿನ ಸ್ನಾಯುಗಳು ಸಡಿಲಗೊಳ್ಳುವುದರಿಂದ ‘ಗೊರಕೆ‘ಗೆ ಕಾರಣವಾಗುತ್ತವೆ.
ಪರಿಣಾಮ
ಗೊರಕೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಮಧುಮೇಹ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಗೊರಕೆ ನಿಯಂತ್ರಿಸಲು ಪರಿಹಾರ
ಪ್ರತಿನಿತ್ಯ ಪ್ರಾಣಾಯಾಮ ಹಾಗೂ ವ್ಯಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆಯನ್ನು ನಿಯಂತ್ರಿಸಬಹುದು.
ಪ್ರತಿದಿನ 3–4 ಲೀಟರ್ ನೀರು ಕುಡಿಯಬೇಕು
ರಾತ್ರಿ ಮಲಗುವ ಮುನ್ನ 1–2 ಕಾಳು ಲವಂಗವನ್ನು ತಿನ್ನಬಹುದು ಅಥವಾ ಲವಂಗವನ್ನು ಪುಡಿ ಮಾಡಿ ಬಾಯಲ್ಲಿ ಹಾಕಿಕೊಂಡು ಮಲಗಬಹುದು
ಅಂಗಾತ ಮಲಗದೆ ಬಲ ಅಥವಾ ಎಡ ಬದಿಗೆ ತಿರುಗಿ ಮಲಗಬೇಕು
ಲೇಖಕರು: ಬೆಂಗಳೂರಿನ ಆಯುರ್ವೇದ ವೈದ್ಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.