ADVERTISEMENT

ಪಂಜಾಬ್‌ | ರಾಜೀನಾಮೆ ಹಿಂಪಡೆದ ಎಎಪಿ ಶಾಸಕಿ ಅನ್ಮೋಲ್‌

ಪಿಟಿಐ
Published 20 ಜುಲೈ 2025, 13:39 IST
Last Updated 20 ಜುಲೈ 2025, 13:39 IST
ಎಎಪಿ 
ಎಎಪಿ    

ಚಂಡೀಗಢ: ವಿಧಾನಸಭೆಯ ಸದಸ್ಯತ್ವಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕಿ ಅನ್ಮೋಲ್‌ ಗಗನ್ ಮಾನ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. 

ಪಂಜಾಬ್‌ನ ಎಎಪಿ ಘಟಕದ ಅಧ್ಯಕ್ಷ ಅಮನ್‌ ಅರೋರ ಅವರು ಅನಮೋಲ್ ಅವರನ್ನು ಭೇಟಿಯಾಗಿ, ಪಕ್ಷ ಮತ್ತು ಕ್ಷೇತ್ರಕ್ಕಾಗಿ ತಮ್ಮ ಕೆಲಸವನ್ನು ಮುಂದುವರಿಸುವಂತೆ ಕೇಳಿಕೊಂಡರು. ಬಳಿಕ ತಮ್ಮ ಸ್ಥಾನದಲ್ಲಿ ಮುಂದುವರಿಯುವುದಾಗಿ ಅನ್ಮೋಲ್‌ ತಿಳಿಸಿದ್ದಾರೆ. 

ಈ ಬಗ್ಗೆ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅರೋರ ಅವರು ‘ರಾಜೀನಾಮೆಯನ್ನು ತಿರಸ್ಕರಿಸಲು ಪಕ್ಷ ನಿರ್ಧರಿಸಿರುವುದಾಗಿ ಅನ್ಮೋಲ್‌ ಅವರಿಗೆ ತಿಳಿಸಿದೆವು. ಪಕ್ಷ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಜೊತೆಯಾಗಿ ಕೆಲಸ ಮಾಡುವಂತೆ ಕೇಳಿದೆವು. ಈಗ ಅವರು ನಮ್ಮ ಪಕ್ಷದ ಕುಟುಂಬದ ಭಾಗವಾಗಿ ಉಳಿಯಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.