ADVERTISEMENT

1206: ಮಾಜಿ CM ವಿಜಯ್ ರೂಪಾನಿಗೆ ಅದೃಷ್ಟ ಸಂಖ್ಯೆಯೇ ದುರದೃಷ್ಟ ತಂದಿತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜೂನ್ 2025, 9:54 IST
Last Updated 13 ಜೂನ್ 2025, 9:54 IST
<div class="paragraphs"><p>ವಿಜಯ್ ರೂಪಾನಿ</p></div>

ವಿಜಯ್ ರೂಪಾನಿ

   

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ (ಜೂನ್ 12) ಪತನಗೊಂಡ ಏರ್ ಇಂಡಿಯಾ ವಿಮಾನದಲ್ಲಿದ್ದ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಒಳಗೊಂಡಂತೆ 265ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.

ಸರ್ಧಾರ್ ವಲ್ಲಭಾಬಾಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಜನರನ್ನು ಹೊತ್ತೊಯ್ದ ಬೋಯಿಂಗ್ 787–8 ಡ್ರೀಮ್‌ಲೈನರ್‌ ವಿಮಾನವು ರನ್‌ವೇಯಿಂದ 7.6 ಕಿ.ಮೀ. ದೂರದ ಮೇಘನಿ ನಗರ್‌ ಎಂಬಲ್ಲಿ ಬಿಜೆ ವೈದ್ಯಕೀಯ ಕಾಲೇಜಿನ ಮೇಲೆ ಬಿದ್ದು, ಸ್ಫೋಟಗೊಂಡಿದೆ. ರಮೇಶ್‌ ವಿಶ್ವಾಸಕುಮಾರ ಎಂಬುವವರನ್ನು ಹೊರತುಪಡಿಸಿ ವಿಮಾನದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ. ಮತ್ತೊಂದೆಡೆ ವಿಮಾನ ಬಿದ್ದ ವೈದ್ಯಕೀಯ ಕಾಲೇಜಿನಲ್ಲೂ ಸಾವುನೋವುಗಳಾಗಿವೆ.

ADVERTISEMENT

ತಮ್ಮ ಕುಟುಂಬದವರನ್ನು ಕಾಣಲು ವಿಜಯ್ ರೂಪಾನಿ ಅವರು ಲಂಡನ್‌ ಪ್ರವಾಸ ಕೈಗೊಂಡಿದ್ದರು. ಆದರೆ ಅವರು 12ನೇ ಜೂನ್‌ (1206) ರಂದು ದುರಂತ ಅಂತ್ಯ ಕಂಡಿದ್ದು, ಇದೀಗ ಅವರ ಅದೃಷ್ಟ ಸಂಖ್ಯೆಗೆ ಹೋಲಿಕೆ ಮಾಡಿ ವಿಶ್ಲೇಷಿಸಲಾಗುತ್ತಿದೆ. 

ರೂಪಾನಿ ಅವರ ಬಳಿ ಇರುವ ವಾಹನಗಳ ನೋಂದಣಿ ಸಂಖ್ಯೆ 1206 ಇದೆ. ಅವರ ಸ್ಕೂಟರ್‌, ಕಾರುಗಳಿಗೆ ಇದೇ ಸಂಖ್ಯೆಯನ್ನು ಪಡೆದಿದ್ದಾರೆ. ಇಷ್ಟೇ ಏಕೆ, ದುರಂತ ವಿಮಾನದ ಪ‍್ರಯಾಣಿಕರ ಪಟ್ಟಿಯಲ್ಲೂ ರೂಪಾನಿ ಅವರ ಸಂಖ್ಯೆ 12 ಆಗಿದೆ. ಬೋರ್ಡಿಂಗ್ ಸಮಯ ಮಧ್ಯಾಹ್ನ 12:10. ವಿಮಾನ ಅಪಘಾತಗೊಂಡಿದ್ದೂ 12/06ರಂದು ಎಂಬ ಮಾಹಿತಿ ವ್ಯಾಪಕವಾಗಿ ಚರ್ಚೆಗೊಳ್ಳುತ್ತಿದೆ.

ರೂಪಾನಿ ಅವರು ಝಡ್‌–ಶ್ರೇಣಿ ಟಿಕೆಟ್ (ಬ್ಯುಸಿನೆಸ್‌ ಕ್ಲಾಸ್‌) ಹೊಂದಿದ್ದರು. ಆದರೆ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. 1965ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ಬಲವಂತರಾಯ್ ಮೆಹ್ತಾ ಅವರು ಮೃತಪಟ್ಟಿದ್ದರು. 

ಅರುಣಾಚಲಪ್ರದೇಶ ಮುಖ್ಯಮಂತ್ರಿ ದೋರ್ಜಿ ಖಂಡು ಅವರು 2011ರಲ್ಲಿ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು 2009ರಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಇತರರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.