ADVERTISEMENT

ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ: ಆಗಸ್ಟ್ 5 ಐತಿಹಾಸಿಕ ದಿನ ಎಂದ ಬಾಬಾ ರಾಮ್‌ ದೇವ್

ಏಜೆನ್ಸೀಸ್
Published 5 ಆಗಸ್ಟ್ 2020, 4:16 IST
Last Updated 5 ಆಗಸ್ಟ್ 2020, 4:16 IST
ಯೋಗಗುರು ರಾಮ್‌ದೇವ್
ಯೋಗಗುರು ರಾಮ್‌ದೇವ್   

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಆಗಸ್ಟ್ 5 'ಐತಿಹಾಸಿಕ ದಿನ' ಎಂದು ಯೋಗಗುರು ರಾಮ್‌ದೇವ್ ತಿಳಿಸಿದರು.

ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ರಾಮ್‌ದೇವ್ ಅವರು, ಮಂಗಳವಾರ ಮಧ್ಯಾಹ್ನವೇ ಅಯೋಧ್ಯೆಗೆ ತಲುಪಿದ್ದು, ಭೂಮಿಪೂಜೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇಂದು ಮುಂಜಾನೆ ಹನುಮಾನ್ ಗರ್ಹಿ ದೇಗುಲಕ್ಕೆ ಭೇಟಿ ನೀಡಿದ ಅವರು, ಈ ದಿನ (ಆಗಸ್ಟ್ 05) ಐತಿಹಾಸಿಕ ದಿನ ಮತ್ತು ಮುಂದಿನ ತಲೆಮಾರುಗಳು ಬಹಳ ಹೆಮ್ಮೆಯಿಂದ ಈ ದಿನವನ್ನು ನೆನಪಿಸಿಕೊಳ್ಳುತ್ತವೆ ಎಂದು ತಿಳಿಸಿದರು.

'ಇದು ಎಲ್ಲಾ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳ ಅತಿಕ್ರಮಣದ ಅಂತ್ಯವಾಗಿರುತ್ತದೆ. ರಾಮ ದೇವಾಲಯದ ಸ್ಥಾಪನೆಯು ದೇಶದಲ್ಲಿ ಹೊಸ ಸಂಸ್ಕೃತಿಯನ್ನು ಪ್ರಾರಂಭಿಸುತ್ತದೆ' ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಕುರಿತಂತೆ ಪ್ರಶ್ನಿಸಿದ್ದಕ್ಕೆ, 'ರಾಮ ಮತ್ತು ಹನುಮನ 'ಭಕ್ತ'ನಾಗಿರುವ ಒಬ್ಬ ಪ್ರಧಾನಿಯನ್ನು ನಾವು ಹೊಂದಿದ್ದೇವೆ. ಇದು ನಮ್ಮ ದೇಶದ ಅದೃಷ್ಟ. ಹಿಂದೂ ಧರ್ಮವನ್ನು ಹೆಮ್ಮೆಪಡುವಂತೆ ಮಾಡಿದವರು ನಮ್ಮ ಪ್ರಧಾನಿ' ಎಂದರು.

ಈಮಧ್ಯೆ, ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಭದ್ರತೆ ಮತ್ತು ಕೋವಿಡ್-19 ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ. ಬುಧವಾರ ರಾಮ ಮಂದಿರದ ದೇವಾಲಯದ ಭೂಮಿಪೂಜೆ ಸಮಾರಂಭಕ್ಕೂ ಮುನ್ನ ಪ್ರಧಾನಿ ಮೋದಿ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.