ADVERTISEMENT

Bihar Polls 2025: ಎಲ್ಲಾ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ JDU

ಪಿಟಿಐ
Published 16 ಅಕ್ಟೋಬರ್ 2025, 10:41 IST
Last Updated 16 ಅಕ್ಟೋಬರ್ 2025, 10:41 IST
<div class="paragraphs"><p> ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

   

–ಪಿಟಿಐ ಚಿತ್ರ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗೆ 44 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಯು ಗುರುವಾರ ಬಿಡುಗಡೆ ಮಾಡಿತು. ಈ ಮೂಲಕ, ಚುನಾವಣೆಯಲ್ಲಿ ಸ್ಪರ್ಧಿಸಲಿರುವ 101 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ‍ಪ್ರಕಟಿಸಿದಂತಾಗಿದೆ. 

ADVERTISEMENT

ಅಭ್ಯರ್ಥಿಗಳ ಪೈಕಿ ಶೇ 50ರಷ್ಟು ಹಿಂದುಳಿದ (ಒಬಿಸಿ) ಹಾಗೂ ಅತೀ ಹಿಂದುಳಿದ ವರ್ಗದವರು (ಇಬಿಸಿ). 37 ಒಬಿಸಿಗಳು ಹಾಗೂ 22 ಇಬಿಸಿ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಪ್ರಬಲ ಜಾತಿಗಳ 22 ಹುರಿಯಾಳುಗಳಿಗೆ ಟಿಕೆಟ್‌ ಕೊಡಲಾಗಿದೆ. ಪಕ್ಷವು 13 ಮಹಿಳೆಯರಿಗೆ ಟಿಕೆಟ್‌ ನೀಡಿದೆ.  ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 17ರಷ್ಟಿದ್ದರೆ, ಪ್ರಬಲ ಜಾತಿಗಳ ಜನಸಂಖ್ಯೆ ಶೇ 15ರಷ್ಟಿದೆ. ಆದರೆ, ನಾಲ್ಕು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. 

2020ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಸಚಿವ ಸುಮಿತ್ ಸಿಂಗ್ ಅವರನ್ನು ಈ ಬಾರಿ ಪಕ್ಷವು ಚಕೈ ವಿಧಾನಸಭಾ ಕ್ಷೇತ್ರದಲ್ಲಿ ನಾಮನಿರ್ದೇಶನ ಮಾಡಿದೆ. ಸಚಿವರಾದ ಜಮಾ ಖಾನ್‌ (ಚೈನ್‌ಪುರ) ಜಯಂತ್ ರಾಜ್ (ಅಮರ್‌ಪುರ) ಮತ್ತು ಲೆಸಿ ಸಿಂಗ್‌ (ಧಮ್ದಾಹಾ) ಅವರ ಹೆಸರು ಪಟ್ಟಿಯಲ್ಲಿ ಸೇರಿದೆ. 

ವಾರದ ಹಿಂದಷ್ಟೇ ಪಕ್ಷಕ್ಕೆ ಸೇರಿದ್ದ ವಿಭಾ ದೇವಿ ಅವರನ್ನು ನವಾಡಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. 2020ರ ಚುನಾವಣೆಯಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ಗೆದ್ದಿದ್ದರು. ಆದರೆ, ಶಿಯೋಹರ್‌ನ ಹಾಲಿ ಶಾಸಕ ಚೇತನ್ ಆನಂದ್ ಅವರನ್ನು ನಬಿನಗರದಿಂದ ಕಣಕ್ಕಿಳಿಸಲಾಗಿದೆ.

57 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿತ್ತು. ಎಲ್‌ಜೆಪಿ (ಪಾಸ್ವಾನ್‌ ಬಣ) ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಪಟ್ಟು ಹಿಡಿದಿದ್ದ ನಾಲ್ಕು ಕ್ಷೇತ್ರಗಳಿಗೆ ಜೆಡಿಯು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಮೊದಲ ಪಟ್ಟಿಯಲ್ಲಿ, ನಿತೀಶ್ ಕುಮಾರ್ ಅವರ ಪಕ್ಷವು ಸೋನ್‌ಬಾರ್ಸಾ, ಮೋರ್ವಾ, ಎಕ್ಮಾ ಮತ್ತು ರಾಜ್‌ಗಿರ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈ ನಡೆ ಈ ಕ್ಷೇತ್ರಗಳನ್ನು ಬಯಸಿದ್ದ ಚಿರಾಗ್ ಪಾಸ್ವಾನ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಚಿರಾಗ್ ಅವರ ಪಕ್ಷವು 14 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿದೆ. ಬಿಜೆಪಿಯು ಎಲ್ಲ 101 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.