ADVERTISEMENT

ಜಾರ್ಖಂಡ್: ಇಬ್ಬರು ಮೇಲಧಿಕಾರಿಗಳನ್ನು ಗುಂಡಿಕ್ಕಿ ಕೊಂದ ಸಿಆರ್‌ಪಿಎಫ್ ಯೋಧ

ಏಜೆನ್ಸೀಸ್
Published 10 ಡಿಸೆಂಬರ್ 2019, 4:45 IST
Last Updated 10 ಡಿಸೆಂಬರ್ 2019, 4:45 IST
   

ರಾಂಚಿ: ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಕಾನ್‌ಸ್ಟೆಬಲ್,ತನ್ನ ಇಬ್ಬರು ಮೇಲಧಿಕಾರಿಗಳನ್ನು ಗುಂಡು ಹಾರಿಸಿ ಕೊಂದಿರುವ ಘಟನೆ ಬೊಕಾರೊ ಪಟ್ಟಣದಲ್ಲಿ ಸೋಮವಾರನಡೆದಿದೆ. ಗುಂಡು ತಲುಗಿ ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ.

ಸಿಆರ್‌ಪಿಎಫ್‌ನ 226ನೇ ಬೆಟಾಲಿಯನ್‌ನ ಕಾನ್‌ಸ್ಟೆಬಲ್‌ ಪಾನಮತ್ತನಾಗಿ ಅಸಿಸ್ಟೆಂಟ್‌ ಕಮಾಂಡೆಂಡ್ ಮತ್ತು ಅಸಿಸ್ಟೆಂಟ್‌ ಸಬ್ ಇನ್‌ಸ್ಪೆಕ್ಟರ್‌ ಅವರತ್ತ ಸೋಮವಾರ ರಾತ್ರಿ 9.30ಕ್ಕೆಗುಂಡು ಹಾರಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಂಡು ಹಾರಿಸಲು ಕಾರಣವೇನೆಂದು ತಿಳಿದುಬಂದಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ADVERTISEMENT

ರಾಂಚಿಯಲ್ಲಿ ಸೋಮವಾರ ನಡೆದ ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ ಛತ್ತೀಸಗಡ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಒಬ್ಬರು ಕಂಪನಿ ಕಮಾಂಡರ್‌ ಮೇಲೆ ಗುಂಡು ಹಾರಿಸಿ, ತಾವೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಳೆದ ವಾರ ಛತ್ತೀಸಗಡದ ನಾರಾಯಣಪುರ ಜಿಲ್ಲೆಯಲ್ಲಿರುವಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್‌ (ಐಟಿಬಿಪಿ) ಶಿಬಿರದಲ್ಲಿ ಕಾನ್‌ಸ್ಟೆಬಲ್ ಒಬ್ಬರು ಗುಂಡು ಹಾರಿಸಿ ಐವರು ಸಹೋದ್ಯೋಗಿಗಳನ್ನು ಕೊಂದಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಇತರರು ಗುಂಡು ಹಾರಿಸಿ ಅವರನ್ನು ಕೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.