ಶಾಂತಿಯುತ ಮತದಾನಕ್ಕಾಗಿ ಅರೆ ಸೇನಾ ಪಡೆಯ 220 ತುಕಡಿ, 35,626 ಪೊಲೀಸರು, ಗೃಹ ರಕ್ಷಕ ದಳದ 19 ಸಾವಿರ ಸಿಬ್ಬಂದಿ ಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಮತದಾನಕ್ಕಾಗಿ ಚುನಾವಣೆ ಆಯೋಗವು 13,766 ಮತಗಟ್ಟೆಗಳನ್ನು ತೆರೆದಿದೆ.
ಇಂದು (ಬುಧವಾರ) ಬೆಳಿಗ್ಗೆ 7ರಿಂದ ಮತದಾನ ಆರಂಭವಾಗಿದೆ
ಎಎಪಿ ಶಾಸಕ ಹಾಗೂ ಅಭ್ಯರ್ಥಿ ಅಮಾನತುಲ್ಲಾ ಖಾನ್ ವಿರುದ್ಧ ದೆಹಲಿ ಪೊಲೀಸರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅತಿಶಿ ಮತದಾನ ಮಾಡಿದರು
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯವರೆಗೆ ಶೇ.8.10 ರಷ್ಟು ಮತದಾನ ದಾಖಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಶೇ.10.7 ಹಾಗೂ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಶೇ.12.43ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು
ಉಪರಾಷ್ಟ್ರಪತಿ ಜಗದೀಪ್ ಧನಕರ್
ಮುಖ್ಯಮಂತ್ರಿ ಅತಿಶಿ
ವಿದೇಶಾಂಗ ಸಚಿವ ಜೈಶಂಕರ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ
ಸಂಸದೆ ಪ್ರಿಯಾಂಕ ಗಾಂಧಿ... ಸೇರಿ ಇತರರು ಮತದಾನ ಮಾಡಿದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬುಧವಾರ ಬೆಳಿಗ್ಗೆ 11 ಗಂಟೆಯವರೆಗೆ ಶೇ.19.95ರಷ್ಟು ಮತದಾನ ದಾಖಲಾಗಿದೆ.
ದೆಹಲಿ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾನ ಮಾಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ್ದಾರೆ. ಪೋಷಕರರು ಕುಳಿತಿದ್ದ ಗಾಲಿ ಕುರ್ಚಿಯನ್ನು ಕೇಜ್ರಿವಾಲ್ ತಳ್ಳಿಕೊಂಡು ಆಗಮಿಸಿ, ಹಕ್ಕು ಚಲಾಯಿಸಿದರು.
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ವಿರುದ್ಧ ಪೊಲೀಸರು ಇಂದು (ಬುಧವಾರ) ಎಫ್‌ಐಆರ್ ದಾಖಲಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಖಾನ್ ಅವರು ಓಖ್ಲಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಸಂಜೆ 5 ಗಂಟೆ ಹೊತ್ತಿಗೆ ದೆಹಲಿಯಲ್ಲಿ ಶೇ 50.70ರಷ್ಟು ಮತದಾನವಾಗಿದ್ದು, 6ಗಂಟೆ ಒಳಗೆ ಸರತಿ ಸಾಲಿನಲ್ಲಿ ನಿಂತವರೆಲ್ಲರಿಗೂ ಮತದಾನಕ್ಕೆ ಅನುವು ಮಾಡಿಕೊಡುವುದಾಗಿ ಚುನಾವಣಾ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.