ADVERTISEMENT

Delhi Polls | ಎಎಪಿ, ಕಾಂಗ್ರೆಸ್, ಬಿಜೆಪಿ ಖರ್ಚು ಮಾಡಿದ ಹಣವೆಷ್ಟು?

ಶಮಿನ್‌ ಜಾಯ್‌
Published 23 ಮೇ 2025, 5:17 IST
Last Updated 23 ಮೇ 2025, 5:17 IST
<div class="paragraphs"><p>ಎಎಪಿ,  ಬಿಜೆಪಿ,&nbsp;ಕಾಂಗ್ರೆಸ್</p></div>

ಎಎಪಿ, ಬಿಜೆಪಿ, ಕಾಂಗ್ರೆಸ್

   

Credit: DH, PTI Photos

ನವದೆಹಲಿ: ಇದೇ ವರ್ಷ ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.

ADVERTISEMENT

70 ಕ್ಷೇತ್ರಗಳ ಪೈಕಿ 68 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 68 ಅಭ್ಯರ್ಥಿಗಳಿಗೆ ಬಿಜೆಪಿ ತಲಾ ₹25 ಲಕ್ಷದಂತೆ ₹17 ಕೋಟಿ ನೀಡಿದರೆ, ಎಎಪಿ ಪಕ್ಷವು ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ₹10 ಲಕ್ಷ ಸೇರಿದಂತೆ 70 ಅಭ್ಯರ್ಥಿಗಳ ಪೈಕಿ 23 ಅಭ್ಯರ್ಥಿಗಳಿಗೆ ₹2.23 ಕೋಟಿ ನೀಡಿದೆ. ಇತ್ತ ಕಾಂಗ್ರೆಸ್ ತನ್ನ 70 ಅಭ್ಯರ್ಥಿಗಳಲ್ಲಿ ಯಾರಿಗೂ ವೈಯಕ್ತಿಕವಾಗಿ ಹಣಕಾಸು ಒದಗಿಸಲಿಲ್ಲ.

ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವರದಿಗಳ ಪ್ರಕಾರ, ಈ ವರ್ಷದ ಜನವರಿ-ಫೆಬ್ರುವರಿಯಲ್ಲಿ ಎಎಪಿ ಚುನಾವಣಾ ಪ್ರಚಾರಕ್ಕಾಗಿ ಒಟ್ಟು ₹14.51 ಕೋಟಿ ಖರ್ಚು ಮಾಡಿದೆ. ಇತ್ತ ಕಾಂಗ್ರೆಸ್ ಪ್ರಚಾರಕ್ಕಾಗಿ ₹46.18 ಕೋಟಿ ವೆಚ್ಚ ಮಾಡಿದೆ. ಬಿಜೆಪಿ ಇನ್ನೂ ತನ್ನ ಪೂರ್ಣ ಖರ್ಚು ವರದಿಯನ್ನು ಸಲ್ಲಿಸಿಲ್ಲ. ಆದರೆ, ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಸಮಾನವಾಗಿ ಹಣಕಾಸು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

ಎಎಪಿ ಸಲ್ಲಿಸಿದ ವೆಚ್ಚದ ವರದಿಯ ಪ್ರಕಾರ, ಪಕ್ಷವು ಮಾಧ್ಯಮ ಜಾಹೀರಾತುಗಳು, ಪೋಸ್ಟರ್‌ಗಳು ಮತ್ತು ನೋಟಿಸ್‌ಗಳು ಸೇರಿದಂತೆ ಚುನಾವಣಾ ಪ್ರಚಾರಕ್ಕಾಗಿ ₹12.12 ಕೋಟಿ ಖರ್ಚು ಮಾಡಿದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಲು ₹16 ಲಕ್ಷ, ಗೂಗಲ್‌ ಜಾಹೀರಾತುಗಳಿಗಾಗಿ ₹2.24 ಕೋಟಿ ಮತ್ತು ಫೇಸ್‌ಬುಕ್‌ನಲ್ಲಿ ಪ್ರಚಾರಕ್ಕಾಗಿ ₹73.57 ಲಕ್ಷ ಖರ್ಚು ಮಾಡಿದೆ.

ಮೋತಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಹರೀಶ್ ಖುರಾನಾ ವಿರುದ್ಧ ಸೋತ ಎಎಪಿ ಅಭ್ಯರ್ಥಿ ಶಿವಚರಣ್ ಗೋಯೆಲ್ ಅವರಿಗೆ ಪಕ್ಷವು ಅತಿ ಹೆಚ್ಚು ₹39 ಲಕ್ಷ ನೀಡಿತ್ತು. ಉಳಿದಂತೆ ಕೇಜ್ರಿವಾಲ್ಅವರಿಗೆ ₹10 ಲಕ್ಷ, ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಆತಿಶಿ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ತಲಾ ₹20 ಲಕ್ಷ, ಗೋಪಾಲ್ ರೈ ₹24.75 ಲಕ್ಷ, ಸೌರಭ್ ಭಾರದ್ವಾಜ್ ₹22.8 ಲಕ್ಷ ಮತ್ತು ಸತ್ಯೇಂದರ್ ಜೈನ್ ₹23 ಲಕ್ಷ ಪಡೆದಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಕಾಂಗ್ರೆಸ್ ಸುಮಾರು ₹5.94 ಕೋಟಿ ಖರ್ಚು ಮಾಡಿದ್ದರೆ, ಪತ್ರಿಕೆಗಳ ಜಾಹೀರಾತುಗಳಿಗಾಗಿ ₹17.93 ಕೋಟಿ ಮತ್ತು ಪೋಸ್ಟರ್‌ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳಿಗಾಗಿ ₹18 ಕೋಟಿ, ಸಾರ್ವಜನಿಕ ಸಭೆಗಳನ್ನು ನಡೆಸಲು ₹4.85 ಕೋಟಿ ಖರ್ಚು ಮಾಡಿದೆ. ಜತೆಗೆ ಸ್ಟಾರ್ ಪ್ರಚಾರಕರ ವೆಚ್ಚಕ್ಕಾಗಿ ₹37,104 ವೆಚ್ಚ ಮಾಡಿದೆ.

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಮುದ್ರಿಸಲು ₹2.79 ಕೋಟಿ ಖರ್ಚು ಮಾಡಲಾಗಿದ್ದು, ನೇರ ಪ್ರಸಾರ ಕಾರ್ಯಕ್ರಮಗಳಿಗೆ ₹20.11 ಲಕ್ಷ ಮತ್ತು ಪತ್ರಿಕಾಗೋಷ್ಠಿಗಳಿಗೆ ₹33,500 ಖರ್ಚು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.