
ನವದೆಹಲಿ: ಹಿಂದೂಗಳು ಪ್ರಮುಖ ಹಬ್ಬಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯು ಜಗತ್ತಿನಲ್ಲೇ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ ಎಂದು ಯುನೆಸ್ಕೊ ಸಾರಿದೆ.
2025ರ ಪಟ್ಟಿಯನ್ನು ಯುನೆಸ್ಕೊ ಬುಧವಾರ ಬಿಡುಗಡೆ ಮಾಡಿದೆ. ದೀಪಾವಳಿಯೊಂದಿಗೆ ಜಗತ್ತಿನ 19 ಇತರ ಸಾಂಸ್ಕೃತಿಕ ಪರಂಪರೆಯನ್ನೂ ಹೆಸರಿಸಿದೆ. ಆ ಮೂಲಕ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ರಕ್ಷಣೆ ಮತ್ತು ಅವುಗಳ ಮಹತ್ವಗಳ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವುದಾಗಿಯೂ ಯುನೆಸ್ಕೊ ಹೇಳಿದೆ.
ದೀಪಾವಳಿಯೊಂದಿಗೆ ತಂಗೈಲ್‌ನ ಸಾಂಪ್ರದಾಯಿಕ ಸೀರೆ ನೇಯ್ಗೆ ಕಲೆ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಸಾಂಸ್ಕೃತಿಕ ಪರಂಪರೆ ಎಂಬುದು ಕೇವಲ ಸ್ಮಾರಕಕ್ಕಷ್ಟೇ ಸೀಮಿತವಲ್ಲ. ಇದರಲ್ಲಿ ಪರಂಪರೆ ಅಥವಾ ಪರಂಪರಾಗತವಾಗಿ ಬಂದ ಸಂಪ್ರದಾಯಗಳೂ ಸೇರಿವೆ. ಇದರಲ್ಲಿ ಮೌಖಿಕವಾದ ಜನಪದ, ಕಲೆ, ಸಾಮಾಜಿಕ ಪದ್ಧತಿಗಳು, ಆಚರಣೆ, ಹಬ್ಬಗಳು, ಜ್ಞಾನ ಮತ್ತು ಪ್ರಕೃತಿಗೆ ಸಂಬಂಧಿಸಿದ ಆಚರಣೆ, ಕೌಶಲ ಹಾಗೂ ಸಾಂಪ್ರದಾಯಿಕ ಕರಕುಶಲ ಜ್ಞಾನವೂ ಒಳಗೊಂಡಿದೆ.
ಯುನೆಸ್ಕೊ ಪಟ್ಟಿಗೆ ಈ ವರ್ಷ ದೀಪಾವಳಿ ಸೇರಿದೆ. ಇದರೊಂದಿಗೆ ಭಾರತದ ಹಲವು ಹಬ್ಬಗಳು ಈ ಪಟ್ಟಿಯನ್ನು ಸೇರಿವೆ.
ಕೋಲ್ಕತ್ತದಲ್ಲಿ ದುರ್ಗಾ ಪೂಜೆ (2021)
ಕುಂಭಮೇಳ (2017)
ನೌರುಜ್ (2016)
ಪಂಜಾಬ್‌ನ ಜಂಡಿಯಾಲ ಗುರುವಿನ ಥಥೇರಾಗಳಲ್ಲಿ ಸಾಂಪ್ರದಾಯಿಕ ಹಿತ್ತಾಳೆ ಮತ್ತು ತಾಮ್ರದ ಪಾತ್ರೆ ತಯಾರಿಕೆ (2014)
ಮಣಿಪುರದ ಸಂಕೀರ್ತನೆ (2013)
ಲಡಾಖ್‌ನ ಬೌದ್ಧ ಧರ್ಮದ ತ್ರಿಪಿಟಕ ಪಠಣ (2012)
ಛೌ ನೃತ್ಯ, ರಾಜಸ್ಥಾನದ ಕಲ್ಬೇಲಿಯಾ ನೃತ್ಯ ಮತ್ತು ಕೇರಳದ ಮುಡಿಯೆಟ್ಟು (2010)
ಗರ್ವಾಲ್‌ನ ರಾಮನ್ ಹಬ್ಬ (2009)
ಕುಟಿಯಾಟ್ಟಂ ಸಂಸ್ಕೃತ ರಂಗಭೂಮಿ, ರಾಮಲೀಲಾ ಮತ್ತು ವೇದ ಪಠಣ (2008)
ಜೆಕಿಯಾ ಬಲ್ಗೇರಿಯಾದಲ್ಲಿ ಬ್ಯಾಗ್‌ಪೈಪ್‌ಗಳು ಮತ್ತು ಬ್ಯಾಗ್‌ಪೈಪ್ ನುಡಿಸುವಿಕೆ: ಜ್ಞಾನ ಮತ್ತು ಕೌಶಲ್ಯಗಳ ಪ್ರಸರಣ | ಬಲ್ಗೇರಿಯಾ
ಬೆಹ್ಜಾದ್ ಅವರ ಚಿಕಣಿ ಕಲೆಯ ಶೈಲಿ | ಅಫ್ಗಾನಿಸ್ತಾನ
ಬಿಶ್ತ್ (ಪುರುಷರ ಅಬಾ): ಕೌಶಲ ಮತ್ತು ಪದ್ಧತಿಗಳು | ಕತಾರ್ - ಬಹ್ರೇನ್ - ಇರಾಕ್ - ಜೋರ್ಡಾನ್ - ಕುವೈತ್ - ಓಮನ್ - ಸೌದಿ ಅರೇಬಿಯಾ - ಸಿರಿಯನ್ ಅರಬ್ ಗಣರಾಜ್ಯ - ಯುನೈಟೆಡ್ ಅರಬ್ ಎಮಿರೇಟ್ಸ್
ಬ್ರಸೆಲ್ಸ್‌ನ ರಾಡ್ ಮರಿಯೊನೆಟ್ ಸಂಪ್ರದಾಯ | ಬೆಲ್ಜಿಯಂ
ಕ್ರಿಸ್‌ಮಸ್ ಬ್ರಾಮ್ ಮತ್ತು ಗೇಲ್ಸ್ ಪಾಯಿಂಟ್ ಮನಾಟೀ, ಬೆಲೀಜ್‌ನ ಸಾಂಬೈ | ಬೆಲೀಜ್
ಕಮಾಂಡೇರಿಯಾ ವೈನ್ | ಸೈಪ್ರಸ್
ಕ್ಯುರ್ಟೆಟೊ: ಅರ್ಜೆಂಟೀನಾದ ಕಾರ್ಡೋಬಾ ನಗರದಲ್ಲಿ ಸಂಗೀತ, ನೃತ್ಯ ಮತ್ತು ಸಾಹಿತ್ಯ | ಅರ್ಜೆಂಟೀನಾ
ದೀಪಾವಳಿ | ಭಾರತ
ಚಿಲಿಯಲ್ಲಿ ಸಾಂಪ್ರದಾಯಿಕ ಸರ್ಕಸ್ | ಚಿಲಿಯಲ್ಲಿ
ಗ್ವಾಡಾಲುಪೆಯ ವರ್ಜೆನ್‌ನ ಹಬ್ಬ - ಸುಕ್ರೆಯ ಪೋಷಕತ್ವ | ಬೊಲಿವಿಯಾ (ಬಹುವಚನ ರಾಜ್ಯ)
ಗಿಫಾಟಾ, ವೊಲೈಟಾ ಜನರು ಹೊಸ ವರ್ಷದ ಹಬ್ಬ | ಇಥಿಯೋಪಿಯಾ
ಗುರುನಾ, ಮಸ್ಸಾದಲ್ಲಿ ಜಾನುವಾರುಗಳ ಮೇಲೆ ಕೇಂದ್ರೀಕೃತವಾದ ಗ್ರಾಮೀಣ, ಸಾಮಾಜಿಕ-ಸಾಂಸ್ಕೃತಿಕ ಮತ್ತು ಕಲಾತ್ಮಕ ಹಿಮ್ಮೆಟ್ಟುವಿಕೆಗಳ ಅಭ್ಯಾಸ | ಚಾಡ್ - ಕ್ಯಾಮರೂನ್
ಹದ್ರಾಮಿ ಡಾನ್ ಸಭೆ | ಯೆಮೆನ್ ವೆನೆಜುವೆಲಾದಲ್ಲಿ ಜೋರೊಪೊ | ವೆನೆಜುವೆಲಾ (ಬೊಲಿವೇರಿಯನ್ ಗಣರಾಜ್ಯ)
ಕೋಶರಿ, ದೈನಂದಿನ ಜೀವನ ಭಕ್ಷ್ಯ ಮತ್ತು ಅದಕ್ಕೆ ಸಂಬಂಧಿಸಿದ ಅಭ್ಯಾಸಗಳು | ಈಜಿಪ್ಟ್
ಮ್ವೆಟ್ ಓಯೆಂಗ್, ಸಂಗೀತ ಕಲೆ, ಅಭ್ಯಾಸಗಳು ಮತ್ತು ಕೌಶಲ್ಯಗಳು ಎಕಾಂಗ್ ಸಮುದಾಯದೊಂದಿಗೆ ಸಂಬಂಧಿಸಿದೆ | ಗ್ಯಾಬೊನ್ - ಕ್ಯಾಮರೂನ್ - ಕಾಂಗೋ
ಹೂವುಗಳು ಮತ್ತು ತಾಳೆ ಮರಗಳ ಒಡನಾಟ | ಎಲ್ ಸಾಲ್ವಡಾರ್
ಕ್ಯೂಬನ್ ಸನ್ ಅಭ್ಯಾಸ | ಕ್ಯೂಬಾ
ಸಾಂಪ್ರದಾಯಿಕ ವಿವಾಹದಲ್ಲಿ ಜಫಾ | ಜಿಬೌಟಿ - ಕೊಮೊರೊಸ್ - ಯುನೈಟೆಡ್ ಅರಬ್ ಎಮಿರೇಟ್ಸ್ - ಇರಾಕ್ - ಜೋರ್ಡಾನ್ - ಮಾರಿಟಾನಿಯಾ - ಸೊಮಾಲಿಯಾ
ಟ್ಯಾಂಗೈಲ್‌ನ ಸಾಂಪ್ರದಾಯಿಕ ಸೀರೆ ನೇಯ್ಗೆ ಕಲೆ | ಬಾಂಗ್ಲಾದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.