
ಅಮೆರಿಕ-ಭಾರತ
(ಐಸ್ಟೋಕ್ ಚಿತ್ರ)
ನವದೆಹಲಿ: ಭಾರತ ಹಾಗೂ ಅಮೆರಿಕದ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಈ ಸಂಬಂಧ ಉಭಯ ದೇಶಗಳು ಶನಿವಾರ ಜಂಟಿ ಹೇಳಿಕೆಯನ್ನು ಹೊರಡಿಸಿದ್ದು, ಚೌಕಟ್ಟನ್ನು ರೂಪಿಸಿವೆ. ಇದರ ಮುಖ್ಯಾಂಶಗಳು ಇಲ್ಲಿವೆ.
*ಭಾರತದ ಮೇಲಿನ ಸುಂಕವನ್ನು ಶೇ 50ರಿಂದ ಶೇ 18ಕ್ಕೆ ಇಳಿಸಿದ ಅಮೆರಿಕ
*ಇದು ಭಾರತೀಯ ರಫ್ತುದಾರರು, ವಿಶೇಷವಾಗಿಯೂ ಎಂಎಸ್‌ಎಂಇಗಳು, ರೈತರು ಮತ್ತು ಮೀನುಗಾರರಿಗೆ 30 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಪ್ರವೇಶವನ್ನು ತೆರೆದುಕೊಳ್ಳುತ್ತದೆ.
*ರಫ್ತು ಹೆಚ್ಚಳವು ಮಹಿಳೆಯರು ಹಾಗೂ ಯುವಜನರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ.
*ಅಮೆರಿಕದಿಂದ ಭಾರತೀಯ ವಸ್ತುಗಳ ಮೇಲಿನ ಪ್ರತಿ ಸುಂಕ ಶೇ 18ಕ್ಕೆ ಇಳಿಕೆ
*ಜವಳಿ ಉಡುಪುಗಳು, ಚರ್ಮ, ಪಾದರಕ್ಷೆ, ಪ್ಲಾಸ್ಟಿಕ್, ರಬ್ಬರ್, ಸಾವಯವ ರಾಸಾಯನಿಕ, ಗೃಹಾಲಂಕಾರ, ಕುಶಲಕರ್ಮಿ ಉತ್ಪನ್ನ ಮತ್ತು ಯಂತ್ರೋಪಕರಣಗಳಂತಹ ಪ್ರಮುಖ ವಲಯಗಳಲ್ಲಿ ರಫ್ತು ಹೆಚ್ಚಿಸಲು ದೊಡ್ಡ ಮಾರುಕಟ್ಟೆ ಅವಕಾಶ ತೆರೆದುಕೊಳ್ಳಲಿವೆ.
*ಜೆನೆರಿಕ್ ಔಷಧಗಳು, ರತ್ನ, ವಜ್ರ, ವಿಮಾನಗಳ ಬಿಡಿಭಾಗ ಸೇರಿದಂತೆ ವಿವಿಧ ಶ್ರೇಣಿಯ ವಸ್ತುಗಳ ಮೇಲಿನ ಸುಂಕ ಸುಂಕ ಶೂನ್ಯಕ್ಕೆ ಇಳಿಯಾಗಲಿವೆ. ಇದರಿಂದ ಭಾರತದ ರಫ್ತು ಹಾಗೂ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಉತ್ತೇಜನ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.
*ಸೆಕ್ಷನ್ 232ರ ಅಡಿಯಲ್ಲಿ ವಿಮಾನ ಬಿಡಿಭಾಗ, ಆಟೋ ಬಿಡಿಭಾಗ ಮೇಲಿನ ಸುಂಕ ಕೋಟಾ ಮತ್ತು ಜೆನಿರಿಕ್ ಔಷಧಗಳ ಮೇಲೆ ಭಾರತ ವಿನಾಯಿತಿ ಪಡೆಯಲಿದೆ.
*ಕೃಷಿ ಹಾಗೂ ಡೇರಿ ಉತ್ಪನ್ನಗಳು ಸೇರಿದಂತೆ ಮೆಕ್ಕೆಜೋಳ, ಗೋಧಿ, ಅಕ್ಕಿ, ಸೋಯಾ, ಕೋಳಿ, ಹಾಲು, ಚೀಸ್, ಎಥೆನಾಲ್ (ಇಂಧನ), ತಂಬಾಕು, ನಿರ್ದಿಷ್ಠ ತರಕಾರಿ ಹಾಗೂ ಮಾಂಸಗಳಿಗೆ ಭಾರತವು ಸಂಪೂರ್ಣ ರಕ್ಷಣೆಯನ್ನು ಒದಗಿಸಿವೆ. ಅಂದರೆ ಈ ವಸ್ತುಗಳ ಮೇಲೆ ಅಮೆರಿಕಕ್ಕೆ ಸುಂಕ ರಿಯಾಯಿತಿ ಇರುವುದಿಲ್ಲ.
*ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ಕೈಗಾರಿಕಾ ವಸ್ತುಗಳು, ಒಣ ಡಿಸ್ಟಿಲರ್ ಧಾನ್ಯಗಳು, ಕೆಂಪು ಜೋಳ, ಬೀಜ, ತಾಜಾ ಹಾಗೂ ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಸುಂಕವನ್ನು ತೆಗೆದು ಹಾಕಲಿದೆ ಅಥವಾ ಕಡಿಮೆ ಮಾಡಲಿವೆ.
*ಉಭಯ ದೇಶಗಳು ತಮ್ಮ ಹಿತಾಸಕ್ತಿಯ ಆಧಾರದಲ್ಲಿ ಆದ್ಯತಾ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಬದ್ಧವಾಗಿವೆ.
*ಭಾರತ ಹಾಗೂ ಅಮೆರಿಕಕ್ಕೆ ಪ್ರಯೋಜನವಾಗುವಂತೆ ವ್ಯಾಪಾರ ಒಪ್ಪಂದ ನಿಯಮ ರೂಪಿಸಲಾಗಿದೆ.
*ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸುಂಕಯೇತರ ಅಡೆತಡೆಗಳನ್ನು ಭಾರತ-ಅಮೆರಿಕ ಬಗೆಹರಿಸಲಿದೆ.
*ಅಮೆರಿಕ ವೈದ್ಯಕೀಯ ಪರಿಕರಗಳ ವ್ಯಾಪಾರಕ್ಕೆ ದೀರ್ಘಕಾಲದಿಂದ ಇದ್ದ ಅಡೆತಡೆ ನಿವಾರಣೆಗೆ ಭಾರತ ಸಮ್ಮತಿ. ಅಮೆರಿಕದ ಮಾಹಿತಿ ಹಾಗೂ ಸಂವಹನ ವಸ್ತುಗಳ ಮಾರುಕಟ್ಟೆ ಪ್ರವೇಶವನ್ನು ವಿಳಂಬಗೊಳಿಸುವ ನಿಬಂಧನೆ ಅಥವಾ ನಿರ್ಬಂಧಿತ ಆಮದು ಪರವಾನಗಿ ಕಾರ್ಯವಿಧಾನವನ್ನು ತೆಗೆದು ಹಾಕಲಿದೆ.
*ಪರಸ್ಪರ ಸಮ್ಮತಿಸಿದ ವಲಯಗಳಿಗೆ ಸಂಬಂಧಿಸಿದಂತೆ ಕಾರ್ಯವಿಧಾನ ಚರ್ಚಿಸಲು ಭಾರತ-ಅಮೆರಿಕ ಒಪ್ಪಿಗೆ.
*ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೂಲಕ ಮಾರುಕಟ್ಟೆ ಪ್ರವೇಶ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಲು ಕೆಲಸ ಮಾಡಲಿವೆ.
*ಆರ್ಥಿಕ ಭದ್ರತೆ ಬಲಪಡಿಸಲು ಪರಸ್ಪರ ಸಹಕಾರ.
*ಮುಂದಿನ ಐದು ವರ್ಷಗಳಲ್ಲಿ ಭಾರತವು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನ, ವಿಮಾನ ಬಿಡಿಭಾಗ, ಅಮೂಲ್ಯ ಲೋಹ, ತಂತ್ರಜ್ಞಾನ ವಸ್ತು ಮತ್ತು ಕಲ್ಲಿದ್ದಲು ಖರೀದಿಸಲು ಉದ್ದೇಶಿಸಲಾಗಿದೆ.
*ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್, ಡೇಟಾ ಸೆಂಟರ್ ಸೇರಿದಂತೆ ಜಂಟಿ ತಂತ್ರಜ್ಞಾನ ಸಹಕಾರ ಹಾಗೂ ತಂತ್ರಜ್ಞಾನ ಉತ್ಪನ್ನಗಳಲ್ಲಿ ವ್ಯಾಪಾರ ಗಣನೀಯವಾಗಿ ಹೆಚ್ಚಳ ಕಂಡುಬರಲಿವೆ.
*ಡಿಜಿಟಲ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಅಡೆತಡೆಗಳನ್ನು ನಿವಾರಿಸಲು ಉಭಯ ದೇಶಗಳು ಬದ್ಧವಾಗಿವೆ.
*ಉಭಯ ದೇಶಗಳಿಗೆ ಪ್ರಯೋಜನಕಾರಿಯಾಗುವ ದ್ವಿಪಕ್ಷೀಯ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿ ಈ ಚೌಕಟ್ಟನ್ನು ತ್ವರಿತವಾಗಿ ಜಾರಿಗೆ ತರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.