ADVERTISEMENT

ಕೆನಡಾದಲ್ಲಿ ಕೆಫೆ ಮೇಲೆ ದಾಳಿ: ಕಪಿಲ್‌ ಶರ್ಮಾಗೆ ಭದ್ರತೆ ಒದಗಿಸಿದ ಮುಂಬೈ ಪೊಲೀಸ್

ಪಿಟಿಐ
Published 12 ಆಗಸ್ಟ್ 2025, 1:55 IST
Last Updated 12 ಆಗಸ್ಟ್ 2025, 1:55 IST
   

ಮುಂಬೈ: ಕೆನಡಾದಲ್ಲಿರುವ ‘ಕ್ಯಾಪ್ಸ್‌ ಕೆಫೆ ರೆಸ್ಟೋರೆಂಟ್‌’ನಲ್ಲಿ ಇತ್ತೀಚೆಗೆ ಎರಡನೇ ಬಾರಿಗೆ ಗುಂಡಿನ ದಾಳಿ ನಡೆದ ಬಳಿಕ, ಅದರ ಮಾಲೀಕ, ಹಾಸ್ಯನಟ ಕಪಿಲ್‌ ಶರ್ಮಾ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಕಪಿಲ್‌ ಅವರ ಸುರಕ್ಷತೆಯ ದೃಷ್ಟಿಯಿಂದ ಭದ್ರತೆ ಒದಗಿಸಲಾಗಿದೆ. ಮುಂಬೈ ನಗರದಲ್ಲಿ ಅಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಕಪಿಲ್ ಅವರ ಕುಟುಂಬಕ್ಕೂ ಭದ್ರತೆ ಒದಗಿಸಲಾಗಿದೆಯೇ ಎನ್ನುವ ಪ್ರಶ್ನೆಗೆ, ಈ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಜುಲೈ 4ರಂದು ಕಪಿಲ್‌ ಹೊಸದಾಗಿ ‘ಕ್ಯಾಪ್ಸ್‌ ಕೆಫೆ ರೆಸ್ಟೋರೆಂಟ್‌’ ಆರಂಭಿಸಿದ್ದರು. ಆದರೆ ಜುಲೈ 10ರಂದು ಮತ್ತು ಆಗಸ್ಟ್‌ 7ರಂದು ಎರಡು ಬಾರಿ ಕೆಫೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕೆಫೆಗೆ ಹಾನಿಯಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.