ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: 1999ರ ಕಾರ್ಗಿಲ್ ಯುದ್ಧದ ಗೆಲುವಿನ 26ನೇ ವರ್ಷದ ಸಂಭ್ರಮಾಚರಣೆಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಲಡಾಖ್‌ನ ದ್ರಾಸ್‌ನಲ್ಲಿ ಶನಿವಾರ 1 ಸಾವಿರ ಯುವ ಸ್ವಯಂ ಸೇವಕರು, ಮಾಜಿ ಸೈನಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಮಡಿದ ಸೈನಿಕರ ಕುಟುಂಬಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಪಾದಯಾತ್ರೆ ಮಾಡಲಿದ್ದಾರೆ.
‘ಮೇರಾ ಯುವ ಭಾರತ್’ ಸಂಘಟಿಸಿರುವ ‘ಕಾರ್ಗಿಲ್ ವಿಜಯ ದಿವಸ ಪಾದಯಾತ್ರೆ’ಯಲ್ಲಿ ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸಂಜಯ್ ಸೇಥ್ ಕೂಡ ಭಾಗಿಯಾಗಲಿದ್ದಾರೆ.
1.5 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ದ್ರಾಸ್‌ನ ಹಿಮಬಸ್ಸ್ ಪಬ್ಲಿಕ್ ಹೈಸ್ಕೂಟ್ ಮೈದಾನದಿಂದ ಬೆಳಿಗ್ಗೆ 7 ಗಂಟೆಗೆ ಆರಂಭವಾಗಿ, ಭೀಮ್‌ಬೆಟ್‌ನ ಸರ್ಕಾರಿ ಹೈಯರ್ ಸೆಕೆಂಡರ್ ಶಾಲೆಯಲ್ಲಿ ಅಂತ್ಯವಾಗಲಿದೆ ಎಂದು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಆ ಬಳಿಕ ಉಭಯ ಸಚಿವರು 100 ಯುವ ಸ್ವಯಂ ಸೇವಕರೊಂದಿಗೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ, ಹೂಗುಚ್ಛ ಅರ್ಪಿಸುವ ಮೂಲಕ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ.
ಪ್ರಾಣ ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಬೈಕ್ ಯಾತ್ರೆ ಮೂಲಕ ಯುದ್ಧ ಸ್ಮಾರಕಕ್ಕೆ ಆಗಮಿಸಲಿರುವ ಶಕ್ತಿ ಉದ್ಘೋಷ್ ಫೌಂಡೇಶನ್‌ನ 26 ಮಹಿಳಾ ಬೈಕರ್‌ಗಳನ್ನು ಮಾಂಡವೀಯಾ ಅವರು ಸನ್ಮಾನಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.