ADVERTISEMENT

ಲೋಕಸಭೆ ಚುನಾವಣೆ 2024: ವೇಳಾಪಟ್ಟಿ ಪ್ರಕಟ– ಜೂನ್ 4ಕ್ಕೆ ರಿಸಲ್ಟ್!

ಲೋಕಸಭೆ ಚುನಾವಣೆ 2024 ಕ್ಕೆ ಕೇಂದ್ರ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದೆ: ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿವೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮಾರ್ಚ್ 2024, 12:52 IST
Last Updated 16 ಮಾರ್ಚ್ 2024, 12:52 IST
<div class="paragraphs"><p>ಲೋಕಸಭೆ ಚುನಾವಣೆ 2024</p></div>

ಲೋಕಸಭೆ ಚುನಾವಣೆ 2024

   

ನವದೆಹಲಿಯಲ್ಲಿ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಘೋಷಣೆಯನ್ನು ಕೇಂದ್ರ ಚುನಾವಣಾಧಿಕಾರಿಗಳು ಮಾಡಿದ್ದಾರೆ.  ಎಲ್ಲ ತಯಾರಿ ಮಾಡಿಕೊಂಡು ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಜೊತೆ ಚುನಾವಣಾ ಆಯೋಗದ ನೂತನ ಸದಸ್ಯರಾದ ಜ್ಞಾನೇಶ್‌ ಕುಮಾರ್ ಹಾಗೂ ಸುಖಬೀರ್ ಸಿಂಗ್ ಇದ್ದಾರೆ. 3 ಗಂಟೆಗೆ ಮಾಧ್ಯಮ ಗೋಷ್ದಿ ಆರಂಭವಾಗಿದೆ. ಅಂತೂ ಲೋಕಸಭೆ ಚುನಾವಣೆ 2024ಕ್ಕೆ ದಿನಾಂಕ ಪ್ರಕಟವಾಗಿದೆ.

ಲೋಕಸಭೆ ಚುನಾವಣೆ ನಡೆಸಲು ಆಯೋಗ ಸರ್ವಸನ್ನದ್ಧವಾಗಿದೆ ಎಂದು ಘೋಷಿಸಿದ ಮುಖ್ಯ ಚುನಾವಣಾ ಆಯುಕ್ತ. 18ನೇ ಲೋಕಸಭೆಗೆ ಚುನಾವಣಾ ದಿನಾಂಕ ಘೋಷಣೆ, ಅಧಿಸೂಚನೆ ಪ್ರಕಟ, 543 ಲೋಕಸಭಾ ಕ್ಷೇತ್ರ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ತಯಾರಿಯಾಗಿದೆ ಎಂದ ರಾಜೀವ್ ಕುಮಾರ್

ದೇಶದಲ್ಲಿ ಸುಮಾರು 97 ಕೋಟಿ ಮತದಾರರು ಇದ್ದಾರೆ 1.5 ಕೋಟಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 49.7 ಕೋಟಿ ಪುರುಷ ಮತದಾರರು, 47.1 ಕೋಟಿ ಮಹಿಳಾ ಮತದಾರರು ಇದ್ದಾರೆ. ಸಮಾರು 19.74 ಕೋಟಿ ಯುವ ಮತದಾರರು

10.05 ಲಕ್ಷ ಮತಗಟ್ಟೆಗಳನ್ನು ಸಿದ್ಧಪಡಿಸಲಾಗುವುದು: ರಾಜೀವ್ ಕುಮಾರ್

1.8 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ

ಒಟ್ಟು 55 ಲಕ್ಷ ಇವಿಎಂಗಳ ಬಳಕೆ: ರಾಜೀವ್ ಕುಮಾರ್

85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ

12 ರಾಜ್ಯಗಳಲ್ಲಿ ಪುರುಷ ಮತದಾರರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಜಾಸ್ತಿ

48 ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ

ವಯೋವೃದ್ಧ ಮತದಾರರನ್ನು ಮತಗಟ್ಟೆಗೆ ಕರೆತರಲು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು

ಮತಗಟ್ಟೆಗಳಲ್ಲಿ ಮಾಹಿತಿ ಕೇಂದ್ರ, ಗಾಲಿ ಕುರ್ಚಿ ಕುಡಿಯುವ ನೀರು ವ್ಯವಸ್ಥೆ. ಶೇ 40ಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಇರುವವರಿಗೆ ಮನೆಯಿಂದಲೇ ಮತದಾನ ಅವಕಾಶ

80 ಮೇಲಿನ ಮತದಾರರು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ

ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ಆಯೋಗಕ್ಕೆ ನೀಡುವುದು ಕಡ್ಡಾಯ

2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ ಎಂದು ಮಾಹಿತಿ ನೀಡಿದ ರಾಜೀವ್ ಕುಮಾರ್

ಗಲಬೆ ನಡೆಸಿದರೆ ಜಾಮೀನು ರಹಿತ ವಾರೆಂಟ್

ಪ್ರತಿ ಜಿಲ್ಲೆಯಲ್ಲೂ ಚುನಾವಣಾ ನಿಯಂತ್ರಣ ಕೊಠಡಿ ಸ್ಥಾಪನೆ ಗಡಿ ಭಾಗದಲ್ಲಿ ಚೆಕ್‌ ಪೋಸ್ಟ್ ಸ್ಥಾಪನೆ ಗಡಿ ಭಾಗಗಳಲ್ಲಿ ಡ್ರೋನ್ ಮೂಲಕ ಕಣ್ಗಾವಲು

ಹಣ ಅಕ್ರಮ ಸಾಗಣೆ, ಹಂಚಿಕೆ ವಿರುದ್ಧ ಕಠಿಣ ಕ್ರಮ

ಹಣ ಅಕ್ರಮ ಸಾಗಣೆ: ರಸ್ತೆ, ರೈಲು ಮತ್ತು ವಾಯು ಮಾರ್ಗದಲ್ಲೂ ತಪಾಸಣೆಗೆ ಕ್ರಮ

ಹಣ ಬಲ, ತೋಳ್ಬಲವನ್ನು ಚುನಾವಣಾ ಅಕ್ರಮಗಳಿಗೆ ಬಳಿಸಿದರೆ ವಿರುದ್ಧ ಕಠಿಣ ಕ್ರಮ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ

ಸೂರ್ಯಾಸ್ತದ ಬಳಿಕ ATM ವಾಹನ ಸಂಚರಿಸುವಂತಿಲ್ಲ

ಮತದಾರರಿಗೆ ಯಾವುದೇ ರೀತಿಯ ಆಮೀಷಗಳನ್ನು ಒಡ್ಡುವಂತಿಲ್ಲ.  ಮತದಾರರನ್ನು ದಿಕ್ಕು ತಪ್ಪಿಸುವಂತೆ ಮಾಡುವ ಹಾಗಿಲ್ಲ.

ಆನ್‌ಲೈನ್‌ನಲ್ಲಿ ನಡೆಯುವ ಹಣದ ವಹಿವಾಟಿನ ಮೇಲೂ ಕಣ್ಣು ಇಡಲಿದ್ದೇವೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳ ಬಳಕೆಗೆ ನಿಷೇಧ. ಉಲ್ಲಂಘಿಸಿದರೆ ಕಠಿಣ ಕ್ರಮ

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ವೀಕ್ಷಣೆ, ವೀಕ್ಷಕರ ಸಮ್ಮುಖದಲ್ಲೇ ಇವಿಎಂಗಳ ವಿತರಣೆ, ಸಂಗ್ರಹ, ಮತ ಎಣಿಕೆ

ಚುನಾವಣೆಯಲ್ಲಿ ಪಕ್ಷಗಳು ವೈಯಕ್ತಿಕ ದಾಳಿ ನಡೆಸದೇ, ಆರೋಗ್ಯಕರ ಸ್ಪರ್ಧೆಗೆ ಒತ್ತು ನೀಡಬೇಕು

ಲೋಕಸಭೆ ಚುನಾವಣೆ ಜೊತೆಗೆ 26 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ 3 ಹಂತಗಳಲ್ಲಿ ನಡೆಯಲಿದೆ:ರಾಜೀವ ಕುಮಾರ್

ಕರ್ನಾಟಕದ ಸುರಪುರ ವಿಧಾನಸಭೆ ಉಪ ಚುನಾವಣೆಯ ದಿನಾಂಕವೂ ಪ್ರಕಟ

ಲೋಕಸಭಾ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ಮತದಾನ

ಆಂಧ್ರದಲ್ಲಿ ಮೇ 13ಕ್ಕೆ ಚುನಾವಣೆ,, ಅರುಣಾಚಲ ಪ್ರದೇಶ ಏಪ್ರಿಲ್ 19 ಚುನಾವಣೆ, ಸಿಕ್ಕಿಂ ಏಪ್ರಿಲ್ 19 ಚುನಾವಣೆ, ಒಡಿಶಾ ಮೇ 13 ಹಾಗೂ ಮೇ 20 (2 ಹಂತಗಳಲ್ಲಿ).

ಲೋಕಸಭಾ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ಮತದಾನ– ಹಂತ–1: 20 ಮಾರ್ಚ್ ಅಧಿಸೂಚನೆ– ಏಪ್ರಿಲ್ 19– ಮತದಾನ– ಜೂನ್ 4ಕ್ಕೆ ಮತ ಎಣಿಕೆ

ಲೋಕಸಭೆ ಚುನಾವಣೆ: ಏಳು ಹಂತ– ಹಂತ1 ಏಪ್ರಿಲ್ 19, ಹಂತ–2 ಏಪ್ರಿಲ್ 26, ಹಂತ–3, ಮೇ 7, ಹಂತ–4 ಮೇ 13, ಹಂತ– 5 ಮೇ 20, ಹಂತ– 6 ಮೇ 25, ಹಂತ– 7 ಜೂನ್ 1. ಜೂನ್ 4ಕ್ಕೆ ರಿಸಲ್ಟ್

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ: ಏಪ್ರಿಲ್ 26ಕ್ಕೆ ಮೊದಲ ಹಂತದ ಮತದಾನ, ಮೇ 7 ಕ್ಕೆ ಎರಡನೇ ಹಂತದ ಮತದಾನ. ಜೂನ್ 4ಕ್ಕೆ ರಿಸಲ್ಟ್

ಲೋಕಸಭೆ ಚುನಾವಣೆ: 7 ಹಂತ– ಹಂತ1 ಏಪ್ರಿಲ್ 19, 102 ಕ್ಷೇತ್ರಗಳು: ಹಂತ–2 ಏಪ್ರಿಲ್ 26, 89 ಕ್ಷೇತ್ರಗಳು: ಹಂತ–3 ಮೇ 7, 94 ಕ್ಷೇತ್ರಗಳು: ಹಂತ–4 ಮೇ 13, 96 ಕ್ಷೇತ್ರಗಳು: ಹಂತ– 5 ಮೇ 20, 49 ಕ್ಷೇತ್ರಗಳು: ಹಂತ– 6 ಮೇ 25, 57 ಕ್ಷೇತ್ರಗಳು: ಹಂತ– 7 ಜೂನ್ 1, 57 ಕ್ಷೇತ್ರಗಳು: ಜೂನ್ 4ಕ್ಕೆ ರಿಸಲ್ಟ್

ಕರ್ನಾಟಕದ 28 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ: ಏಪ್ರಿಲ್ 26 ರಂದು 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಇನ್ನುಳಿದ 14 ಕ್ಷೇತ್ರಗಳಿಗೆ ಎರಡನೇ ಹಂತ ಮೇ 7ರಂದು ಮತದಾನ

ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳು- ಮತದಾನ ಏಪ್ರಿಲ್ 26ಕ್ಕೆ ಉಡುಪಿ ಚಿಕ್ಕಮಗಳೂರು ಹಾಸನ ದಕ್ಷಿಣ ಕನ್ನಡ ಚಿತ್ರದುರ್ಗ ತುಮಕೂರು ಮಂಡ್ಯ ಮೈಸೂರು ಚಾಮರಾಜನಗರ ಬೆಂಗಳೂರು ಗ್ರಾಮಾಂತರ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಬೆಂಗಳೂರು ಕೇಂದ್ರ ಚಿಕ್ಕಬಳ್ಳಾಪುರ ಕೋಲಾರ –– ಮೇ 7ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳು- ಮತದಾನ ಮೇ 7ಕ್ಕೆ ಚಿಕ್ಕೋಡಿ ಬೆಳಗಾವಿ ಬಾಗಲಕೋಟೆ ವಿಜಯಪುರ ಕಲಬುರಗಿ ರಾಯಚೂರು ಬೀದರ್ ಕೊಪ್ಪಳ ಬಳ್ಳಾರಿ ಹಾವೇರಿ ಧಾರವಾಡ ಉತ್ತರ ಕನ್ನಡ ದಾವಣಗೇರೆ ಶಿವಮೊಗ್ಗ –––––

ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶ ಸೇರಿದಂತೆ 4 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಆಂಧ್ರಪ್ರದೇಶ ವಿಧಾನಸಭೆಯ 175 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮೇ 13 ರಂದು ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ. ಬಹುಮತಕ್ಕೆ ಕನಿಷ್ಠ 88 ಸ್ಥಾನಗಳ ಅಗತ್ಯವಿದೆ. ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯ ಪ್ರಸ್ತುತ ಅವಧಿಯು ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿದೆ.

ಸುರಪುರ ವಿಧಾನಸಭಾ ಕ್ಷೇತ್ರ: ಮೇ 7ರಂದು ಉಪಚುನಾವಣೆ, ಜೂನ್‌ 4ರಂದು ಫಲಿತಾಂಶ

ಅರುಣಾಚಲ ಪ್ರದೇಶದ 60, ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 19ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.

ಲೋಕಸಭಾ ಚುನಾವಣೆ ಜೊತೆಯಲ್ಲಿಯೇ 13 ರಾಜ್ಯಗಳ 26 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದರು.

ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣೆ ಆಯೋಗ ಶನಿವಾರ ಘೋಷಣೆ ಮಾಡಿದೆ. ಮೇ 13ರಂದು ಮೊದಲ ಹಂತ, ಮೇ 20ರಂದು ಎರಡನೇ ಹಂತ, ಮೇ 25ರಂದು ಮೂರನೇ ಹಂತ ಹಾಗೂ ಜೂನ್‌ 1ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.