ADVERTISEMENT

ನಾಗ್ಪುರದಲ್ಲಿ ಕುರಾನ್‌ ಸುಟ್ಟಿಲ್ಲ; ಗಲಭೆಕೋರರು ಸಮಾಧಿಯಲ್ಲಿದ್ದರೂ ಬಿಡಲ್ಲ: CM

ಪಿಟಿಐ
Published 19 ಮಾರ್ಚ್ 2025, 15:31 IST
Last Updated 19 ಮಾರ್ಚ್ 2025, 15:31 IST
<div class="paragraphs"><p>ದೇವೇಂದ್ರ ಫಡಣವೀಸ್</p></div>

ದೇವೇಂದ್ರ ಫಡಣವೀಸ್

   

ಪಿಟಿಐ ಚಿತ್ರ

ಮುಂಬೈ: ‘ಮಹಾರಾಷ್ಟ್ರದ ನಾಗ್ಪುರದಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಮತ್ತು ಅದನ್ನು ಮುಚ್ಚಲು ಬಳಸುವ ವಸ್ತ್ರವನ್ನು ಸುಟ್ಟಿಲ್ಲ. ವದಂತಿ ಹರಡಿ ಗಲಭೆ ಎಬ್ಬಿಸಿದವರ, ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಸಮಾಧಿಯಲ್ಲಿ ಅಡಗಿದ್ದರೂ ಹೊರತರುತ್ತೇವೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುಡುಗಿದ್ದಾರೆ.

ADVERTISEMENT

ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಗಲಭೆಕೋರರು ಮಹಿಳಾ ಕಾನ್‌ಸ್ಟೆಬಲ್‌ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕಲ್ಲುಗಳು ಹಾಗು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಡಿಸಿಪಿ ರ‍್ಯಾಂಕ್‌ನ ಮೂವರನ್ನು ಒಳಗೊಂಡು 33 ಪೊಲೀಸರಿಗೆ ಗಾಯಗಳಾಗುವಂತೆ ಮಾಡಿದ್ದಾರೆ. ಈ ಯೋಜನಾಬದ್ಧ ಹಿಂಸಾಚಾರವು ಸ್ಥಳೀಯ ಸಾಮಾಜಿಕ ಸಾಮರಸ್ಯ ಹಾಳು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಛತ್ರಪತಿ ಸಾಂಭಾಜಿನಗರದಲ್ಲಿರುವ ಮೊಘಲ್ ದೊರೆ ಔರಂಗಜೇಬ್‌ ಗುಮ್ಮಟ ತೆರವುಗೊಳಿಸಬೇಕು ಚಾದರ್‌ ಇದ್ದ ಕುರಾನ್‌ ಅನ್ನು ಸುಡಲಾಗಿದೆ ಎಂಬ ವದಂತಿ ಆಧರಿಸಿ ಕೆಲವರು ಗಲಭೆ ನಡೆಸಿದ್ದರು. ಈ ಗಲಭೆಯು ಕೆಲವೇ ವ್ಯಕ್ತಿಗಳ ಯೋಜನಾಬದ್ಧ ಕೃತ್ಯವಾಗಿದೆ. ಇದಕ್ಕಾಗಿ ಇಡೀ ಸಮುದಾಯವನ್ನು ದೂಷಿಸುವುದಿಲ್ಲ. ತನಿಖೆ ವೇಲೆ ವಸ್ತ್ರದ ಮೇಲಿದ್ದ ‘ಅಯಾತ್‌’ ಅನ್ನು ಸುಟ್ಟ ಯಾವುದೇ ಕುರುಹುಗಳು ಸಿಕ್ಕಲ್ಲ. ಘಟನೆಯನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದಿದ್ದಾರೆ.

‘ಪೊಲೀಸರ ಮೇಲೆ ದಾಳಿ ನಡೆಸಿದ್ದನ್ನು ಕ್ಷಮಿಸಲಾಗದು. ಗಲಭೆಯಲ್ಲಿ ಪಾಲ್ಗೊಂಡವರಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಶಾಂತಿಗೆ ಹೆಸರುವಾಸಿಯಾದ ನಾಗ್ಪುರ  ಸದ್ಯ ಶಾಂತಿಯುತವಾಗಿದೆ. 1992ರಿಂದ ನಗರದಲ್ಲಿ ಒಂದು ಸಣ್ಣ ದುರ್ಘಟನೆಯೂ ನಡೆದಿಲ್ಲ’ ಎಂದು ಫಡಣವೀಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.