ನವದೆಹಲಿ: 'ಆಪರೇಷನ್ ಸಿಂಧೂ' ಕಾರ್ಯಾಚರಣೆ ಮೂಲಕ ಇರಾನ್ ಹಾಗೂ ಇಸ್ರೇಲ್‌ನಿಂದ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
'ಆಪರೇಷನ್ ಸಿಂಧೂ' ಕಾರ್ಯಾಚರಣೆ ಮೂಲಕ ಇರಾನ್‌ನಿಂದ 3,597 ಹಾಗೂ ಇಸ್ರೇಲ್‌ನಿಂದ 818 ಮಂದಿ ಸೇರಿದಂತೆ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು ಹಾಗೂ ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
'ಗುರುವಾರ ರಾತ್ರಿ 10.30ಕ್ಕೆ ವಿಶೇಷ ವಿಮಾನವು ಯೆರೆವಾನ್, ಅರ್ಮೇನಿಯಾದಿಂದ ನವದೆಹಲಿಗೆ ಬಂದಿಳಿಯಿತು. ಈ ವಿಮಾನದಲ್ಲಿ 173 ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ' ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ 14 ವಿದೇಶಿ ಸಂಜಾತರು, ನೇಪಾಳದ ಒಂಬತ್ತು, ಶ್ರೀಲಂಕಾದ ನಾಲ್ವರು ಮತ್ತು ಭಾರತೀಯ ಪ್ರಜೆಯೊಬ್ಬರ ಇರಾನ್ ಮೂಲದ ಪತ್ನಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.