ADVERTISEMENT

ವಕ್ಫ್ ತಿದ್ದುಪಡಿ ಮಸೂದೆ: ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ SC ಮೊರೆ ಹೋದ ಓವೈಸಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 12:30 IST
Last Updated 4 ಏಪ್ರಿಲ್ 2025, 12:30 IST
<div class="paragraphs"><p>ಅಸಾದುದ್ಧೀನ್‌ ಓವೈಸಿ</p></div>

ಅಸಾದುದ್ಧೀನ್‌ ಓವೈಸಿ

   

ಪಿಟಿಐ

ನವದೆಹಲಿ: ವಕ್ಫ್‌(ತಿದ್ದುಪಡಿ) ಮಸೂದೆ’ಗೆ ಪ್ರಬಲ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ, ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ADVERTISEMENT

ಮಸೂದೆಯನ್ನು ವಿರೋಧಿಸಿರುವ ಅವರು, ಇದು ಮುಸ್ಲಿಮರ ಮೇಲಿನ ನೇರ ಹಲ್ಲೆಯಾಗಿದ್ದು, ಅವರ ಆಸ್ತಿಗಳನ್ನು ಕಿತ್ತುಕೊಳ್ಳಲಿದೆ ಎಂದು ಗುರುವಾರ ಆರೋಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್‌ ಮಸೂದೆ ಮೂಲಕ ನಮ್ಮ ಎದೆಗೆ ಗುಂಡು ಹಾರಿಸುತ್ತಿದ್ದಾರೆ. ಮಸೀದಿ ದರ್ಗಾಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ಓವೈಸಿ ದೂರಿದ್ದರು.

ಮಸೂದೆಯಲ್ಲಿ ವಕ್ಫ್‌ ಆಸ್ತಿ ಹೌದೋ ಅಲ್ಲವೋ ಎಂಬುದನ್ನು ಪ್ರಮಾಣೀಕರಿಸುವ ಅವಕಾಶ ಜಿಲ್ಲಾಧಿಕಾರಿಗೆ ನೀಡಿದ್ದು ಮುಸ್ಲಿಮರು ತಮ್ಮ ಆಸ್ತಿ ಕಳೆದುಕೊಳ್ಳಲಿದ್ದಾರೆ. ಇದು ಹಿಂದುತ್ವದ ಕಾರ್ಯಸೂಚಿ. ಮಸೂದೆ ಬಗ್ಗೆ ಮುಸ್ಲಿಮರು ಮೌನವಾಗಿ ಕೂರಲ್ಲ ಎಂದು ಹೇಳಿದ್ದರು.

ಮುಸ್ಲಿಮರಿಗೆ ಹಿಂದೂ, ಸಿಖ್‌, ಕ್ರಿಶ್ಚಿಯನ್‌ ಮತ್ತು ಆರ್‌ಎಸ್‌ಎಸ್‌ ಸಂವಿಧಾನ, ಅದರ ಸಿದ್ದಾಂತ, ಮೋದಿ, ಯೋಗಿ ನಿಜವಾದ ಶತ್ರುಗಳು ಎಂದು ಓವೈಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.