ADVERTISEMENT

ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ 12; ರಾಜ್ಯಸಭೆಯಲ್ಲಿ 14 ಮಸೂದೆಗಳ ಅಂಗೀಕಾರ

ಪಿಟಿಐ
Published 21 ಆಗಸ್ಟ್ 2025, 6:17 IST
Last Updated 21 ಆಗಸ್ಟ್ 2025, 6:17 IST
<div class="paragraphs"><p>ಸಂಸತ್ ಭವನ</p></div>

ಸಂಸತ್ ಭವನ

   

ಪಿಟಿಐ ಚಿತ್ರ

ನವದೆಹಲಿ: ಬಿಹಾರದಲ್ಲಿ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ 12 ಹಾಗೂ ರಾಜ್ಯಸಭೆಯಲ್ಲಿ 14 ಮಸೂದೆಗಳನ್ನು ಮಂಡಿಸಿ ಅನುಮೋದನೆ ಪಡೆಯಿತು.

ADVERTISEMENT

ಜುಲೈ 21ರಂದು ಈ ಬಾರಿಯ ಮುಂಗಾರು ಅಧಿವೇಶನ ಆರಂಭಗೊಂಡಿತು. ಆಪರೇಷನ್‌ ಸಿಂಧೂರ ಕುರಿತ ಚರ್ಚೆಗೆ ಆರಂಭದಲ್ಲಿ ಒತ್ತಾಯಿಸಿದ ವಿರೋಧ ಪಕ್ಷಗಳು ನಂತರ ಬಿಹಾರದಲ್ಲಿನ ಎಸ್‌ಐಆರ್‌ ಪರಿಷ್ಕರಣೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿತು. ಮುಂಗಾರು ಅಧಿವೇಶನಕ್ಕೆ ಇಂದು (ಗುರುವಾರ) ತೆರೆ ಬೀಳಲಿದೆ. ಈ ಅವಧಿಯಲ್ಲಿ ಮಂಡಿಸಲಾದ ಮಸೂದೆಗಳ ಪಟ್ಟಿ ಇಲ್ಲಿದೆ.

ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಗಳು...

  • ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2025

  • ಮರ್ಚೆಂಟ್ ಶಿಪ್ಪಿಂಗ್ ಬಿಲ್‌ 2025

  • ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2025

  • ಮಣಿಪುರ ವಿನಿಯೋಗ (ಸಂಖ್ಯೆ 2) ಮಸೂದೆ 2025

  • ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025

  • ರಾಷ್ಟ್ರೀಯ ಉದ್ದೀಪನ ವಿರೋಧಿ (ತಿದ್ದುಪಡಿ) ಮಸೂದೆ 2025

  • ಆದಾಯ ತೆರಿಗೆ 2025

  • ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ

  • ಭಾರತೀಯ ಬಂದರು ಮಸೂದೆ 2025

  • ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025

  • ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ ತಿದ್ದುಪಡಿ ಮಸೂದೆ 2025

  • ಆನ್ಲೈನ್‌ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಮಸೂದೆ 2025

ರಾಜ್ಯಸಭೆಯಲ್ಲಿ ಮಂಡನೆಯಾದ ಮಸೂದೆಗಳು...

  • ಹಡಗುಗಳಿಗೆ ಸರಕು ತುಂಬುವ ಶುಲ್ಕಗಳ ಮಸೂದೆ 2025

  • ಸಮುದ್ರ ಮೂಲಕ ಸರಕು ಸಾಗಣೆ ಮಸೂದೆ 2025

  • ಕರಾವಳಿ ಸರಕು ಸಾಗಣೆ ಮಸೂದೆ 2025

  • ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2025

  • ಮಣಿಪುರ ವಿನಿಯೋಗ (ಸಂಖ್ಯೆ 2) ಮಸೂದೆ 2025

  • ಮರ್ಚೆಂಟ್ ಶಿಪ್ಪಿಂಗ್ ಬಿಲ್‌ 2025

  • ಗೋವಾ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2025

  • ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ 2025

  • ರಾಷ್ಟ್ರೀಯ ಉದ್ದೀಪನ ವಿರೋಧಿ (ತಿದ್ದುಪಡಿ) ಮಸೂದೆ 2025

  • ಆದಾಯ ತೆರಿಗೆ 2025

  • ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ

  • ಭಾರತೀಯ ಬಂದರು ಮಸೂದೆ 2025

  • ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ 2025

  • ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ ತಿದ್ದುಪಡಿ ಮಸೂದೆ 2025

‘ಈ ಬಾರಿ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದರಿಂದಾಗಿ ಹಲವು ಮಸೂದೆಗಳ ಕುರಿತು ನಡೆಯಬೇಕಾಗಿದ್ದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಅವರ ಹಠಮಾರಿ ಧೋರಣೆಯಿಂದಾಗಿ ಚರ್ಚೆಯೇ ಇಲ್ಲದೆ ಹಲವು ಮಸೂದೆಗಳು ಮಂಡನೆಯಾದವು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮೊದಲ ದಿನ ನಡೆದ ಹಡಗುಗಳಿಗೆ ಸರಕು ತುಂಬುವ ಶುಲ್ಕಗಳ ಮಸೂದೆ 2025 ಯಾವುದೇ ಚರ್ಚೆ ಇಲ್ಲದೆ ಮಂಡನೆಯಾಯಿತು. ಉಳಿದ ಮಸೂದೆಗಳ ಕುರಿತು ತುಸು ಮಟ್ಟಿನ ಚರ್ಚೆಗಳು ನಡೆದವು. ಕೆಲವು ಮಸೂದೆಗಳು ವಿರೋಧ ಪಕ್ಷಗಳ ಸದಸ್ಯರ ಸಭಾತ್ಯಾಗದ ನಂತರ ಅನುಮೋದನೆ ಪಡೆದವು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.