ADVERTISEMENT

ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿ.ಕೆ ಶಿವಕುಮಾರ್ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2026, 9:29 IST
Last Updated 19 ಫೆಬ್ರುವರಿ 2026, 9:29 IST
<div class="paragraphs"><p>ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಡಿ.ಕೆ ಶಿವಕುಮಾರ್</p></div>

ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಡಿ.ಕೆ ಶಿವಕುಮಾರ್

   

ಗುವಾಹಟಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

‘ಪ್ರಿಯಾಂಕಾ ಗಾಂಧಿ ಅವರೊಂದಿಗೆ ಇಂದು (ಫೆ.19) ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದೆವು. ತಾಯಿ ಕಾಮಾಕ್ಯ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿ ನೀಡಲಿ. ಜೈ ಮಾ ಕಾಮಾಖ್ಯ’ ಎಂದು ಡಿ.ಕೆ. ಶಿವಕುಮಾರ್ ಅವರು ‘ಎಕ್ಸ್’ ಪೋಸ್ಟ್ ಮಾಡಿದ್ದಾರೆ.

ADVERTISEMENT

ದೇಶದ 51 ಶಕ್ತಿ ಪೀಠಗಳಲ್ಲಿ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇಗುಲವು ಒಂದಾಗಿದೆ. ಇದೇ ದೇವಸ್ಥಾನಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಹಾಗೂ ಡಿ.ಕೆ ಶಿವಕುಮಾರ್ ಅವರು ಭೇಟಿ ಕೊಟ್ಟಿದ್ದಾರೆ.

ಕಾಮಾಕ್ಯ ಕ್ಷೇತ್ರದ ಮಹತ್ವ

ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಕಾಮಾಕ್ಯ ದೇವಿ ದೇಗುಲವು ಒಂದಾಗಿದೆ. ಗುವಾಹಟಿಯ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ದೇವಿ ನೆಲೆಸಿದ್ದಾಳೆ. ಕಾಮಾಕ್ಷಿ ಮಾತೆ ಪ್ರಬಲ ಶಕ್ತಿ ದೇವತೆ ಎನ್ನಿಸಿಕೊಂಡಿದ್ದಾಳೆ. ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತೆ. ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಕಾಮಾಕ್ಯ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಮುಟ್ಟಾದ 3 ದಿನಗಳ ಕಾಲ ಈ ದೇವಾಲಯನ್ನು ಮುಚ್ಚಲಾಗುತ್ತದೆ. ದೇವಿ ಮುಟ್ಟಾದ ಬಟ್ಟೆಯನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಹಂಚಲಾಗುತ್ತದೆ. ಅನೇಕ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.