

ಪ್ರಾತಿನಿಧಿಕ ಚಿತ್ರ
ಶ್ರೀಹರಿಕೋಟ: ಭೂ ಸರ್ವೇಕ್ಷಣಾ ಉಪಗ್ರಹ ಹಾಗೂ ಇತರ 14 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ–ಸಿ62 ರಾಕೆಟ್, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಿದೆ.
2026ರಲ್ಲಿ ಇಸ್ರೋದ ಮೊದಲ ಯೋಜನೆಯಾಗಿದೆ.
ಪಿಎಸ್‌ಎಲ್‌ವಿ ಸರಣಿಯ 64ನೇ ಹಾಗೂ ಪಿಎಸ್‌ಎಲ್‌ವಿ–ಡಿಎಲ್ ಆವೃತ್ತಿಯ 5ನೇ ರಾಕೆಟ್, 260 ಟನ್ ತೂಕದ ಸಾಧನಗಳನ್ನು ಹೊತ್ತು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು (ಸೋಮವಾರ) ಬೆಳಿಗ್ಗೆ 10.18ಕ್ಕೆ ಉಡಾವಣೆಗೊಂಡಿದೆ.
ಇಸ್ರೊ ಅಂಗಸಂಸ್ಥೆಯಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನೇತೃತ್ವದಲ್ಲಿ ದೇಶೀಯ ಹಾಗೂ ವಿದೇಶದ 14 ಉಪಗ್ರಹಗಳನ್ನು 17 ನಿಮಿಷಗಳ ಪ್ರಯಾಣದ ನಂತರ, ಸುಮಾರು 511 ಕಿ.ಮೀ ಎತ್ತರದಲ್ಲಿ ಕಕ್ಷಗೆ ಸೇರಿಸುವ ಗುರಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.