
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೊದಲು ವಾಯು ಸೇನೆಯ ಪೋಷಾಕಿನಲ್ಲಿ ಸಿದ್ಧಗೊಂಡರು
ಪಿಟಿಐ ಚಿತ್ರ
ಚಂಡೀಗಢ: ಹರಿಯಾಣದ ಅಂಬಾಲಾ ವಾಯುಸೇನಾ ನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
ರಾಷ್ಟ್ರಪತಿ ಅವರನ್ನು ಹೊತ್ತ ನಂ. 17 ಗೋಲ್ಡನ್ ಆ್ಯರೊ ಸ್ಕ್ವಾಡ್ರನ್, ಆಗಸದಲ್ಲಿ ಹಾರಾಟ ನಡಸಿದೆ.
2023ರಲ್ಲಿ ಸುಖೋಯ್–30 ಎಂಕೆಐ ಯುದ್ಧ ವಿಮಾನದಲ್ಲಿ ದ್ರೌಪದಿ ಮುರ್ಮು ಅವರು ಹಾರಾಟ ನಡೆಸಿದ್ದರು. ಈ ಬಾರಿ ಅವರು ರಫೇಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸಶಸ್ತ್ರದಳದೊಂದಿಗಿನ ಸಂಬಂಧವನ್ನು ಇನ್ನಷ್ಟು ಆಳಕ್ಕೆ ವಿಸ್ತರಿಸಿದ್ದಾರೆ.
ಫ್ರಾನ್ಸ್‌ನ ರಫೇಲ್ ಯುದ್ಧವಿಮಾನವು 2020ರಲ್ಲಿ ಭಾರತೀಯ ವಾಯು ಸೇನೆ ಸೇರಿತು. 2025ರ ಮೇ 7ರಂದು ಆರಂಭವಾದ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್‌ನಲ್ಲಿ ಅದ್ಭುತವಾದ ಕಾರ್ಯಾಚರಣೆಯನ್ನು ಇದು ನಡೆಸಿತು. ಆ ಮೂಲಕ ಭಾರತೀಯ ವಾಯು ಸೇನೆಯ ಅತ್ಯಾಧುನಿಕ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಿತು.