ADVERTISEMENT

ಪುಣೆ ಚುನಾವಣೆ: ಪ್ರತಿಸ್ಪರ್ಧಿಯ ‘ಬಿ’ ಫಾರಂ ಹರಿದು ನುಂಗಿದ ಶಿವಸೇನಾ ಅಭ್ಯರ್ಥಿ!

ಪಿಟಿಐ
Published 1 ಜನವರಿ 2026, 7:31 IST
Last Updated 1 ಜನವರಿ 2026, 7:31 IST
   

ಮುಂಬೈ: ಪುಣೆ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷದ ಅಭ್ಯರ್ಥಿಯೊಬ್ಬರು ತಮ್ಮ ಪ್ರತಿಸ್ಪರ್ಧಿಯ ‘ಬಿ’ ಫಾರಂ ಅನ್ನು ಹರಿದು ನುಂಗಿದ್ದಾರೆ ಎಂದು ವರದಿಯಾಗಿದೆ.

ಜನವರಿ 15ರಂದು ಪುಣೆ ಪಾಲಿಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪುಣೆ ನಗರದ ವಾರ್ಡ್ ಸಂಖ್ಯೆ 34ರಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಶಿವಸೇನಾ ‘ಬಿ’ ಫಾರಂ ನೀಡಿತ್ತು. ಇದು ಶಿವಸೇನಾ ಅಭ್ಯರ್ಥಿಗಳಾದ ಉದ್ಧವ್ ಕಾಂಬ್ಳೆ ಮತ್ತು ಮಚ್ಚಿಂದ್ರ ಧಾವಳೆ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.

ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ಕಾಂಬ್ಳೆ ಅವರು ಧಾವಳೆಯ ‘ಬಿ’ ಫಾರಂ ಅನ್ನು ಕಸಿದುಕೊಂಡು, ಅದನ್ನು ಹರಿದು ನುಂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಚುನಾವಣಾ ಪ್ರಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕಾಂಬ್ಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ’ ಎಂದೂ ಅವರು ವಿವರಿಸಿದ್ದಾರೆ.

‘ಎ’ ಮತ್ತು ‘ಬಿ’ ಫಾರಂಗಳನ್ನು ರಾಜಕೀಯ ಪಕ್ಷವು ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿಯನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸುವ ಅಗತ್ಯ ದಾಖಲೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.