ADVERTISEMENT

ತಾಲಿಬಾನ್ ಜತೆ ಆರ್‌ಎಸ್‌ಎಸ್‌ ಹೋಲಿಕೆ: ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2021, 7:47 IST
Last Updated 28 ಸೆಪ್ಟೆಂಬರ್ 2021, 7:47 IST
ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್
ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಶೋಕಾಸ್ ನೋಟಿಸ್    

ಬೆಂಗಳೂರು: ಆರ್‌ಎಸ್‌ಎಸ್‌ ಸಂಘಟನೆಯನ್ನು ತಾಲಿಬಾನ್ ಜತೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ಗೀತ ರಚನೆಕಾರ ಜಾವೇದ್ ಅಖ್ತರ್‌ಗೆ ಥಾಣೆ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿದೆ.

ಹೇಳಿಕೆ ಕುರಿತಂತೆ ಜಾವೇದ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ಸೋಮವಾರ ನೋಟಿಸ್ ಜಾರಿ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ನ್ಯೂಸ್ ಚಾನಲ್ ಒಂದರ ಸಂದರ್ಶನದಲ್ಲಿ, ಬಲಪಂಥೀಯ ಆರ್‌ಎಸ್‌ಎಸ್ ಸಂ‌ಘಟನೆಯನ್ನು ತಾಲಿಬಾನ್‌ಗೆ ಹೋಲಿಸಿದ್ದರು.

ADVERTISEMENT

ತಾಲಿಬಾನ್ ಇಸ್ಲಾಮಿಕ್ ರಾಷ್ಟ್ರ ಬಯಸಿದರೆ, ಇವರು ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದಾರೆ ಎಂದು ಜಾವೇದ್ ಅಖ್ತರ್ ನೇರವಾಗಿ ಹೆಸರು ಹೇಳದೆ, ಪರೋಕ್ಷವಾಗಿ ಆರ್‌ಎಸ್‌ಎಸ್‌ ಸಂಘಟನೆಯನ್ನು ದೂಷಿಸಿದ್ದರು.

ಈ ಬಗ್ಗೆ ಆರ್‌ಎಸ್‌ಎಸ್ ಕಾರ್ಯಕರ್ತ ವಿವೇಕ್ ಚಂಪಾನೇರ್ಕರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ₹1 ಪರಿಹಾರ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.