ADVERTISEMENT

ಸೂಟ್‌ಕೇಸ್‌ನಲ್ಲಿ ಯುವತಿ; ವಿದ್ಯಾರ್ಥಿಗಳ 'ಹುಡುಗಾಟಿಕೆ' ಎಂದ ಹರಿಯಾಣ ವಿವಿ

ಪಿಟಿಐ
Published 13 ಏಪ್ರಿಲ್ 2025, 14:01 IST
Last Updated 13 ಏಪ್ರಿಲ್ 2025, 14:01 IST
<div class="paragraphs"><p>ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿನ ದೃಶ್ಯ</p></div>

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿನ ದೃಶ್ಯ

   

ಚಿತ್ರ: X

ಚಂಡೀಗಡ: ಹರಿಯಾಣದ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಯುವತಿಯೊಬ್ಬಳನ್ನು ಸೂಟ್‌ಕೇಸ್‌ನಲ್ಲಿ ಕೂರಿಸಿಕೊಂಡು ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ ಎಂಬ ಸುದ್ದಿ ಶನಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇಂದು ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯವು, ಇದು ವಿದ್ಯಾರ್ಥಿನಿಯರು ನಡೆಸಿದ ಹುಡುಗಾಟಿಕೆಯಷ್ದೇ ಎಂದು ಸ್ಪಷ್ಟನೆ ನೀಡಿದೆ.

ADVERTISEMENT

ಆದಾಗ್ಯೂ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಮತ್ತು ಪ್ರಕರಣದಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್‌ ನೀಡಿರುವುದಾಗಿ ತಿಳಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯು ಅತ್ಯಂತ ಮುಖ್ಯವಾದದ್ದು ಎಂಬುದಾಗಿ ಭಾನುವಾರ ಹೇಳಿಕೆ ನೀಡಿರುವ ವಿವಿಯ ವಕ್ತಾರ, 'ಘಟನೆ ಸಂಬಂಧ ತಕ್ಷಣವೇ ಕ್ರಮ ಕೈಗೊಂಡಿದ್ದೇವೆ' ಎಂದಿದ್ದಾರೆ.

ಒ ಪಿ ಜಿಂದಾಲ್‌ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಮಹಿಳಾ ಸಿಬ್ಬಂದಿಯು ಶುಕ್ರವಾರ ಸೂಟ್‌ಕೇಸ್‌ ತಪಾಸಣೆ ನಡೆಸಿದ್ದರು. ಆಗ ಅದರಲ್ಲಿ ವಿದ್ಯಾರ್ಥಿನಿಯೊಬ್ಬರು ಇದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ವಿಡಿಯೊ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದಂತೆ ಎಚ್ಚೆತ್ತ ವಿವಿಯ ಸಂವಹನ ವಿಭಾಗದ ಮುಖ್ಯಸ್ಥ ಅಂಜೂ ಮೋಹನ್‌, ಇದು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಒಂದು ಗುಂಪು ನಡೆಸಿದ ಹುಡುಗಾಟಿಕೆ (Prank) ಎಂದಿದ್ದಾರೆ.

ವಿದ್ಯಾರ್ಥಿನಿಯರ ಗುಂಪು ವಿದ್ಯಾರ್ಥಿನಿಯಿದ್ದ ಸೂಟ್‌ಕೇಸ್‌ ಅನ್ನು ಹಾಸ್ಟೆಲ್‌ ಆವರಣ, ಮೆಟ್ಟಿಲುಗಳ ಬಳಿಯೆಲ್ಲ ಎಳೆದುಕೊಂಡು ಹೋಗಿದೆ. ನಂತರ, ಒಳಗೆ ಬರುತ್ತಿದ್ದಾಗ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಸೂಟ್‌ಕೇಸ್‌ ತಪಾಸಣೆ ನಡೆಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ ಎಂದು ವಿವರಿಸಿದ್ದಾರೆ.

ಘಟನೆ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದಿರುವ ಅಂಜು, 'ವಿದ್ಯಾರ್ಥಿನಿಯರ ಗುಂಪು ಹುಡುಗಾಟಿಕೆಯಲ್ಲಿ ತೊಡಗಿದ್ದರು. ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ದುರದೃಷ್ಟವಶಾತ್‌ ವಿಡಿಯೊ ಸಾರ್ವಜನಿಕ ವಲಯದಲ್ಲಿ ಹರಿದಾಡಿದೆ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಶೋಕಾಸ್‌ ನೋಟಿಸ್‌ ನೀಡಲಾಗಿದೆ. ಎಲ್ಲರೂ, ಶಿಸ್ತು ಸಮಿತಿ ಎದುರು ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಒ ಪಿ ಜಿಂದಾಲ್‌ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯನ್ನು ಗಂಭೀರವಾಗಿ ಪರಿಗಣಿಸಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.