ADVERTISEMENT

04 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2026, 4:10 IST
Last Updated 4 ಫೆಬ್ರುವರಿ 2026, 4:10 IST
<div class="paragraphs"><p>ಮುಖ 10 ಸುದ್ದಿಗಳು</p></div>

ಮುಖ 10 ಸುದ್ದಿಗಳು

   

ವಿಬಿ ಜಿ ರಾಮ್‌ ಜಿ ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ, BJP–JDS ಅಹೋರಾತ್ರಿ ಧರಣಿ: ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ವಿಧಾನಸಭೆ: ವಿಬಿ ಜಿ ರಾಮ್‌ ಜಿ ವಿರೋಧಿಸಿ ನಿರ್ಣಯ

ಬೆಂಗಳೂರು: ವಿರೋಧಪಕ್ಷಗಳ ಆಕ್ಷೇಪ ಮತ್ತು ಗದ್ದಲದ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ರದ್ದುಪಡಿಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ADVERTISEMENT

ವಿಧಾನಸಭೆಯಲ್ಲಿ BJP–JDS ಅಹೋರಾತ್ರಿ ಧರಣಿ: ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು

ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿರುವ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಸದಸ್ಯರು ಸದನದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ನಡೆಸಿದರು.

ಸಂಸತ್‌ನಲ್ಲಿ ಮತ್ತೆ ಗದ್ದಲ: ವಿರೋಧ ‍ಪಕ್ಷದ 8 ಸಂಸದರ ಅಮಾನತು

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ರಾಷ್ಟ್ರಪತಿ ಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಲು ಅವಕಾಶ ನಿರಾಕರಿಸಿದ್ದು ಮತ್ತು ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವು ಲೋಕಸಭೆಯಲ್ಲಿ ಮಂಗಳವಾರ ತೀವ್ರ ಗದ್ದಲಕ್ಕೆ ಕಾರಣವಾಯಿತು.

ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ | ಕೃಷಿ, ಹೈನುಗಾರಿಕೆಗೆ ರಕ್ಷಣೆ: ಗೋಯಲ್

ನವದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುತ್ತಿದ್ದು, ಕೃಷಿ ಮತ್ತು ಹೈನುಗಾರಿಕೆ ವಲಯಗಳ ಹಿತಾಸಕ್ತಿ ಯನ್ನು ಒಪ್ಪಂದದ ಪರಿಣಾಮದಿಂದ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದರು.

ರಾಜ್ಯಪಾಲರ ಅಂಗಳಕ್ಕೆ ಮತ್ತೆ 'ಒಳ ಮೀಸಲು'

ಬೆಂಗಳೂರು: ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಲು ರೂಪಿಸಿದ್ದ ಮಸೂದೆ ಕುರಿತು ರಾಜ್ಯಪಾಲರು ಎತ್ತಿದ್ದ ಪ್ರಶ್ನೆಗಳಿಗೆ ವಿವರವಾದ ಸ್ಪಷ್ಟೀಕರಣ ಕೊಟ್ಟಿರುವ ಸರ್ಕಾರ, ಅಂಕಿತಕ್ಕಾಗಿ ಮತ್ತೆ ಮಸೂದೆಯನ್ನು ಲೋಕಭವನಕ್ಕೆ ಕಳುಹಿಸಿದೆ.

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಅತಿ ದೊಡ್ಡ ನಿರ್ಧಾರ: ನರೇಂದ್ರ ಮೋದಿ

ನವದೆಹಲಿ: ‘ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಅತಿ ದೊಡ್ಡ ನಿರ್ಧಾರ ವಾಗಿದ್ದು, ದೇಶದ ಪ್ರತಿಯೊಬ್ಬರಿಗೂ ಇದರಿಂದ ನೆರವಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ಜನರ ಒಳಿತಿಗಾಗಿಯೇ ಕೆಲಸ ಮಾಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತೈಲ ಖರೀದಿ ಸ್ಥಗಿತಗೊಳಿಸುವ ಕುರಿತು ಭಾರತ ಯಾವುದೇ ಸಂದೇಶ ನೀಡಿಲ್ಲ: ರಷ್ಯಾ

ಮಾಸ್ಕೊ: ಕಚ್ಚಾ ತೈಲ ಖರೀದಿ ಸ್ಥಗಿತಗೊಳಿಸುವ ಕುರಿತು ಭಾರತದಿಂದ ಯಾವುದೇ ರೀತಿಯ ಸಂದೇಶ ಸ್ವೀಕರಿಸಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ.

ವಿಧಾನಪರಿಷತ್‌: ಮಾತು ಕೆಡಿಸಿದ 'ನಾಲಗೆ'; ವ್ಯರ್ಥ ಕಲಾಪ

ಬೆಂಗಳೂರು: ಕಾಂಗ್ರೆಸ್‌ನ ನಸೀರ್‌ ಅಹಮದ್‌, ಬಿಜೆಪಿಯ ಸಿ.ಟಿ.ರವಿ ಅವರು ಆಡಿದ ಮಾತುಗಳು ವಿಧಾನಪರಿಷತ್‌ನ ಇಡೀ ದಿನದ ಕಲಾಪವನ್ನು ವ್ಯರ್ಥ ಮಾಡಿದವು.

ದ್ವೇಷ ಭಾಷಣ ತಡೆ: ರಾಷ್ಟ್ರಪತಿ ವಿವೇಚನೆಗೆ ಕಾಯ್ದಿರಿಸಿದ ರಾಜ್ಯಪಾಲ ಥಾವರಚಂದ್

ಬೆಂಗಳೂರು: ಸಾಂವಿಧಾನಿಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟು ಮಾಡುವ ಸಾಧ್ಯತೆಯೂ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ, ದ್ವೇಷ ಭಾಷಣ ತಡೆ ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರು, ಮಸೂದೆಯನ್ನು ರಾಷ್ಟ್ರಪತಿಯ ವಿವೇಚನೆಗೆ ಕಾಯ್ದಿರಿಸಿ ರಾಜ್ಯ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.

ಟಿ20 ವಿಶ್ವಕಪ್ ಕ್ರಿಕೆಟ್: ಪಾಕ್‌ ವಿರುದ್ಧ ಕೋರ್ಟ್‌ಗೆ ಪ್ರಸಾರಕರು

ಕರಾಚಿ/ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ 15ರಂದು ಭಾರತದ ಎದುರಿನ ಪಂದ್ಯವನ್ನು ಬಹಿಷ್ಕರಿಸಲು ಮುಂದಾಗಿರುವ ಪಾಕಿಸ್ತಾನದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಲು ಅಧಿಕೃತ ಪ್ರಸಾರಕರಾದ ಜಿಯೊಸ್ಟಾರ್ ಸಿದ್ಧವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.