ADVERTISEMENT

ವಂದೇ ಭಾರತ್‌ ಮಿಷನ್‌: ಬ್ರಿಟನ್‌ನಿಂದ 326 ಭಾರತೀಯರ ಕರೆತಂದ ಏರ್‌ ಇಂಡಿಯಾ ವಿಮಾನ

ಏಜೆನ್ಸೀಸ್
Published 11 ಮೇ 2020, 1:35 IST
Last Updated 11 ಮೇ 2020, 1:35 IST
ಲಂಡನ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಜನರು –ಎಎನ್‌ಐ ಚಿತ್ರ
ಲಂಡನ್‌ನಿಂದ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಜನರು –ಎಎನ್‌ಐ ಚಿತ್ರ   

ಮುಂಬೈ: ಬ್ರಿಟನ್‌ನಲ್ಲಿರುವ 326 ಭಾರತೀಯರನ್ನು ಒಳಗೊಂಡ ಏರ್‌ ಇಂಡಿಯಾ ವಿಮಾನವು ಭಾನುವಾರ ಬೆಳಿಗ್ಗೆ ಮುಂಬೈ ತಲುಪಿದೆ.

326 ಮಂದಿಯನ್ನು ಹೊತ್ತ ಏರ್‌ ಇಂಡಿಯಾ ವಿಮಾನವು ಶನಿವಾರ ಲಂಡನ್‌ನಿಂದ ಪ್ರಯಾಣ ಬೆಳೆಸಿ ಭಾನವಾರ ಬೆಳಿಗ್ಗೆ ಮುಂಬೈನ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ ಎಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ತಿಳಿಸಿದೆ.

ಮೇ 7ರಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಹಂತಹಂತವಾಗಿ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಕಳೆದ ಸೋಮವಾರ ಹೇಳಿತ್ತು. ಮೇ 7ರಿಂದ 13ರ ವರೆಗೆ 15 ಸಾವಿರ ಮಂದಿಯನ್ನು ಕರೆತರಲು ಏರ್ ಇಂಡಿಯಾದ 64 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದೂ ಸರ್ಕಾರ ಹೇಳಿತ್ತು.

‘ವಂದೇ ಭಾರತ್‌ ಮಿಷನ್‌’ನ ಮೂರನೇ ದಿನ ಗಲ್ಫ್‌ ರಾಷ್ಟ್ರಗಳು, ಬ್ರಿಟನ್, ಬಾಂಗ್ಲಾದೇಶ ಹಾಗೂ ಮಲೇಷ್ಯಾದಿಂದ ವಿಮಾನಗಳು ಭಾರತ ತಲುಪಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.