ADVERTISEMENT

ಶೌಚಾಲಯ ಇದ್ದಿದ್ದರೆ ಆ ಮಗು ಸಾಯುತ್ತಿರಲಿಲ್ಲ: ‘ಜೆಸಿಬಿ’ ವಿರುದ್ಧ ಆಪ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2022, 12:56 IST
Last Updated 5 ನವೆಂಬರ್ 2022, 12:56 IST
   

ಬೆಂಗಳೂರು: ಆಳಂದ ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮೂರೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ರಾಜ್ಯ ಆಮ್‌ ಆದ್ಮಿ ಪಕ್ಷ (ಎಎಪಿ), ‘ಎಲ್ಲರ ಮನೆಯಲ್ಲಿಯೂ ಶೌಚಾಲಯ ಇರುವಂತೆ ನೋಡಿಕೊಂಡಿದ್ದರೆ ಇವತ್ತು ಆ ಮಗು ಸಾಯುತ್ತಿರಲಿಲ್ಲ’ ಎಂದು ಹೇಳಿದೆ.

ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ ಘಟನೆ ಆಳಂದ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ನಡೆದಿತ್ತು. ಕಾನೂನು ಸಂಘರ್ಷಕ್ಕೆ ಒಳಪಟ್ಟ ಒಬ್ಬ ಬಾಲಕನನ್ನು ಈ ಪ್ರಕರಣದ ಸಂಬಂಧವಾಗಿ ಪೊಲೀಸರು ಮರುದಿನ ವಶಕ್ಕೆ ಪಡೆದಿದ್ದರು.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಎಎಪಿ, ರಾಜ್ಯದಲ್ಲಿ ಈ ವರೆಗೆ ಆಡಳಿತ ನಡೆಸಿರುವ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯನ್ನು ಕಟುವಾಗಿ ಟೀಕಿಸಿದೆ.

ADVERTISEMENT

‘ಇದು, ಮೇಲ್ನೋಟಕ್ಕೆ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಾದರೂ, ಇದುವರೆಗೂ ಆಡಳಿತ ಮಾಡಿರುವ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ನಾಡಿನ ಹೆಣ್ಣು ಕುಲದ ಮೇಲೆ ಮಾಡಿರುವ ದೌರ್ಜನ್ಯ. ಎಲ್ಲರ ಮನೆಯಲ್ಲಿಯೂ ಶೌಚಾಲಯ ಇರುವಂತೆ ನೋಡಿಕೊಂಡಿದ್ದರೆ ಇವತ್ತು ಆ ಮಗು ಸಾಯುತ್ತಿರಲಿಲ್ಲ’ ಎಂದಿದು ಅಭಿಪ್ರಾಯಪಟ್ಟಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.