ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿ ಬನ್ನೇರುಘಟ್ಟದ ನಾಲ್ಕು ಆನೆಗಳನ್ನು ಗುರುವಾರ ಜಪಾನ್‌ಗೆ ಕಳುಹಿಸಲಾಯಿತು. ತುಳಸಿ, ಶ್ರುತಿ, ಗೌರಿ ಮತ್ತು ಸುರೇಶ ಆನೆಗಳನ್ನು ಕಾರ್ಗೊ ವಿಮಾನದ ಮೂಲಕ ಜಪಾನ್‌ಗೆ ಕಳುಹಿಸಲಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಜಪಾನಿನ ಹಿಮೇಜಿ ಸೆಂಟ್ರಲ್ ಪಾರ್ಕ್‌ಗೆ ನಾಲ್ಕು ಆನೆಗಳಿಗೆ ಗುರುವಾರ ಆತ್ಮೀಯವಾಗಿ ಬೀಳ್ಕೋಡಲಾಯಿತು. ಬನ್ನೇರುಘಟ್ಟ ಉದ್ಯಾನದಿಂದ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಕಾರ್ಯಕ್ರಮ ರೂಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.