ADVERTISEMENT

ಅನರ್ಹ ಶಾಸಕರ‌ ಪ್ರಕರಣ: ಬುಧವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

ಅನರ್ಹರ ಮೇಲ್ಮನವಿ ಕುರಿತು ಪ್ರತಿಕ್ರಿಯೆಗೆ ನೀಡುವಂತೆ ಸ್ಪೀಕರ್‌, ಸಿದ್ದರಾಮಯ್ಯಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 5:51 IST
Last Updated 26 ಸೆಪ್ಟೆಂಬರ್ 2019, 5:51 IST
   

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ‌ ಪ್ರಕರಣದ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು. ಈ ವಿಚಾರಣೆ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

1:37–ಚುನಾವಣೆ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಅನರ್ಹರ ಸ್ಪರ್ಧೆಯ ಅವಕಾಶದ ಬಗ್ಗೆ ಸುಳಿವು ನೀಡಿರುವುದರಿಂದ ಅನರ್ಹರಿಗೆ ಸ್ಪರ್ಧೆಗೆ ಅವಕಾಶ‌ ದೊರೆಯುವ ಆಶಾಭಾವ.

1:25–ಚುನಾವಣಾ ‌ಪ್ರಕ್ರಿಯೆಗೆ ತಡೆ‌ ನೀಡಕೂಡದು.‌ ಅಲ್ಲದೆ, ಅನರ್ಹಗೊಂಡವರನ್ನು ಸ್ಪರ್ಧೆಯಿಂದ‌ ತಡೆಯಲು ಆಗದು ಎಂದು ಆಯೋಗದ ಪರ‌ ವಕೀಲ ರಾಕೇಶ್ ದ್ವಿವೇದಿ ಹೇಳಿದರು.‌ ಅನರ್ಹತೆ ಅಕ್ರಮ ಎಂಬ ಅನರ್ಹರ ಮೇಲ್ಮನವಿ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಹಾಗೂ ಸ್ಪೀಕರ್‌,ಜೆಡಿಎಸ್ ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿಗೂ ನೋಟಿಸ್ ಜಾರಿ ಮಾಡಿದ ನ್ಯಾಯಪೀಠ.

ADVERTISEMENT

1:19– ಬುಧವಾರ ಅನರ್ಹರ ಪರ‌ ವಕೀಲರಿಗೆ ವಾದ‌ ಮಂಡಿಸಲು ಅವಕಾಶ. ಗುರುವಾರ ಕೆಪಿಸಿಸಿ ಪರ ವಕೀಲರಿಗೆ ಅವಕಾಶ. ಸದ್ಯಕ್ಕೆ ಅನರ್ಹರಿಗೆ ಯಾವುದೇ ರೀತಿಯ ರಿಲೀಫ್ ಸಿಗಲಿಲ್ಲ. ನ್ಯಾಯಾಲಯದಲ್ಲಿ ಅನರ್ಹ ಶಾಸಕ ಮುನಿರತ್ನ ಹಾಜರಾಗಿದ್ದರು.

1:18– ಸ್ಪೀಕರ್‌ ಪರ‌ ಹಿರಿಯ ವಕೀಲ ತುಷಾರ್ ಮೆಹ್ತಾ ವಾದ. ಚುನಾವಣೆ ಮುಂದೂಡುವಂತೆ ಕೋರಿ ಅರ್ಜಿ ಸಲ್ಲಿಸುವುದಾಗಿ ರೋಹಟಗಿ ಹೇಳಿದರು. ಸುದೀರ್ಘ ವಿಚಾರಣೆಯ ಅಗತ್ಯ ಇರುವುದರಿಂದ ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ ಪೀಠ

1:09– ಫೆಬ್ರುವರಿಯಲ್ಲಿ ನೋಟಿಸ್ ನೀಡಲಾಗಿದೆ ಎಂಬ ಸಿಬಲ್ ವಾದಕ್ಕೆ ರೋಹಟಗಿಪ್ರತಿಕ್ರಿಯೆ. ಇಬ್ಬರಿಗೆಮಾತ್ರ ಮೊದಲು ನೋಟಿಸ್ ನೀಡಲಾಗಿದೆ. ಉಳಿದವರಿಗೆರಾಜೀನಾಮೆ ಸಲ್ಲಿಸಿದನಂತರವೇ ನೋಟಿಸ್ ನೀಡಲಾಗಿದೆ.

1:08–ವಾದ ಮಂಡಿಸುತ್ತಿರುವಕಪಿಲ್ ಸಿಬಲ್

1:07– ವಿಧಿ361/bಬಗ್ಗೆ ವಿವರಿಸುತ್ತಿರುವ ಮುಕುಲ್ ರೋಹಟಗಿ.361/b ಪ್ರಕಾರ ಅನರ್ಹ ಆದವರು ಅವಧಿ ಮುಗಿಯುವರೆಗೂ ಲಾಭದಾಯಕ ಹುದ್ದೆ ಹೊಂದುವಂತಿಲ್ಲ.ಮರು ಆಯ್ಕೆ ಆಗುವ ವಿಷಯದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.ರಾಜೀನಾಮೆ ಕೊಟ್ಟ ಮೇಲೆ ಪಕ್ಷ ಬದಲಾವಣೆಗೂ ಅಭ್ಯಂತರವಿಲ್ಲ. 361/b ವಿಧಿಯಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇಖವಿಲ್ಲ

1:00–ಉಪಚುನಾವಣೆಗೆ ತಡೆ ನೀಡಬೇಕು. ಈ ಕುರಿತು ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

12:57–ಪಕ್ಷಾಂತರ‌ ನಿಷೇಧ ಕಾಯ್ದೆ ಅಡಿ ಕ್ರಮ ‌ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿಕ್ರಿಯೆಗಾಗಿ ಏಳು ದಿನಗಳ ‌ಬದಲು ಕೇವಲ‌ 3ದಿನಗಳ‌ ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿತ್ತು

12:54–ಸ್ಪೀಕರ್ ನೀಡಿರುವ ಆದೇಶ‌ ಸಂಪೂರ್ಣ ಕಾನೂನುಬಾಹಿರ. ‌ಅವರು ನೋಟಿಸ್ ನೀಡದಿರುವುದು ಕಡ್ಡಾಯವಲ್ಲ ಎಂಬ ವಿವರಣೆ ನೀಡಲಾಗಿದೆ.

12:52–2023ರವರೆಗೆ ಸ್ಪರ್ಧೆಗೆ ಅವಕಾಶ ಇಲ್ಲದಾಗಿದೆ. ಈಗ ಸ್ಪರ್ಧೆಗೆ ಅವಕಾಶ ನೀಡಿ ಇಲ್ಲವೇ ಚುನಾವಣೆಗೆ ತಡೆ‌ನೀಡಿ ಎಂದು ಕೋರ್ಟ್‌ಗೆ ರೋಹಟಗಿ ಮನವಿ

12:48–ರಾಜೀನಾಮೆ ವೈಯಕ್ತಿಕ, ಸ್ವಯಂ ಪ್ರೇರಿತ ಆಗಿದ್ದರೆ ಸ್ವೀಕಾರ ಮಾಡಬೇಕು. ಆದರೂ ವಿಚಾರಣೆ ನಡೆಸದೆಯೇ ಅನರ್ಹಗೊಳಿಸಲಾಗಿದೆ. ಇದೀಗ ಉಪಚುನಾವಣೆ ಘೋಷಣೆ ಆಗಿದ್ದು ಸ್ಪರ್ಧೆಗೆ ಈ ವಿಧಾನಸಭೆ ಅವಧಿ ಇರುವವರೆಗೆ ಅವಕಾಶ‌ ಇಲ್ಲ ಎಂದು ಅನರ್ಹತೆ ಆದೇಶದಲ್ಲಿ ತಿಳಿಸಿದ್ದರಿಂದ ಸಮಸ್ಯೆ ಎದುರಾಗಲಿದೆ.

12:46–‘ರಾಜೀನಾಮೆ ಸಲ್ಲಿಸಿದ್ದ ಶಾಸಕರಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಒಂದು ವಾರ ಮೊದಲೇ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮ ‌ಇದೆ’–ಮುಕುಲ್ ರೋಹಟಗಿವಾದ

12:44– ನ್ಯಾಯಮೂರ್ತಿ ಎನ್.ವಿ.‌ರಮಣ ನೇತೃತ್ವದ ತ್ರಿಸದಸ್ಯ ಪೀಠದಿಂದವಿಚಾರಣೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಕೃಷ್ಣ ಮುರಾರಿ ಪೀಠದಲ್ಲಿದ್ದಾರೆ.

12:40– ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಿದೆ.

11:48- ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ವಿಚಾರಣೆಗೆ ಹಾಜರಾಗದ್ದರಿಂದ ಕೆಲ ಹೊತ್ತು ಪ್ರಕರಣದ ವಿಚಾರಣೆ ಮುಂದೂಡಿದ‌ಪೀಠ

11:46- ಪ್ರಕರಣದ‌ ತುರ್ತು ವಿಚಾರಣೆ ಕೋರಲಾಗಿತ್ತು ಎನ್ನುತ್ತಿದ್ದಂತೆಯೇ ದಿನದ ಅಂತ್ಯಕ್ಕೆ ವಿಸ್ತೃತ‌ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿ ಬೇರೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡರು

11:44– ಕಾಂಗ್ರೆಸ್‌, ಜೆಡಿಎಸ್ ಪಕ್ಷದ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ‌ಯೂ ಘೋಷಣೆಯಾಗಿದೆ. ಅವರ‌ ರಾಜೀನಾಮೆ ಸ್ವೀಕರಿಸದೆ‌ ಅನರ್ಹಗೊಳಿಸಲಾಗಿದೆ. ಅದು ಕಾನೂನುಬಾಹಿರ ಎಂದುಮುಕುಲ್ ರೋಹಟಗಿವಾದ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.