ADVERTISEMENT

2 ಕೆಜಿ ಅಕ್ಕಿ ಬೇಡ, 10 ಕೆಜಿ ಅಕ್ಕಿ ಕೊಡಿ: ಕಾಂಗ್ರೆಸ್ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 10:21 IST
Last Updated 29 ಏಪ್ರಿಲ್ 2021, 10:21 IST
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್   

ಬೆಂಗಳೂರು: ಸಚಿವ ಉಮೇಶ ಕತ್ತಿ ಅವರ ಪಡಿತರ ನೀಡಿಕೆಯ ಕುರಿತಾದ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್, ರಾಜ್ಯದಲ್ಲಿ 2 ಕೆಜಿ ಅಕ್ಕಿ ಬೇಡ, 10 ಕೆಜಿ ಅಕ್ಕಿ ಕೊಡಿ ಎಂಬ ಪತ್ರ ಚಳವಳಿ ಆರಂಭಿಸಿದೆ.

ಗುರುವಾರದಿಂದ ಜನರು ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಪತ್ರ ಬರೆಯಿರಿ, ಸಾಮಾಜಿಕ ತಾಣಗಳಲ್ಲಿ @BJP4Karnataka, @BSYBJP, ಉಮೇಶ್ ಕತ್ತಿ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಜನರು ಪತ್ರದಲ್ಲಿ 2 ಕೆಜಿ ಅಕ್ಕಿ ಬೇಡ, 10 ಕೆಜಿ ಅಕ್ಕಿ ಕೊಡಿ ಎಂದು ಆರಂಭಿಸಿ ಪತ್ರ ಬರೆದು ಚಳವಳಿ ಅಭಿಯಾನ ಬೆಂಬಲಿಸಲು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT

ರಾಜ್ಯ ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿಯನ್ನ 7 ರಿಂದ 5 ಕೆಜಿಗೆ ಹಾಗೂ ಕೊರೊನ ಸಂಕಷ್ಟದ ‌ಸಮಯದಲ್ಲೂ ಅಕ್ಕಿಯನ್ನು 5 ರಿಂದ 2 ಕೆಜಿಗೆ ಕಡಿತಗೊಳಿಸಿದ್ದನ್ನು ಖಂಡಿಸಿ, ಅಕ್ಕಿ ಕೇಳಿದ ರೈತನನ್ನು 'ಸತ್ತು ಹೋಗು' ಎಂದು ಹೇಳಿದ ಆಹಾರ ಸಚಿವ ಉಮೇಶ್ ಕತ್ತಿ ನಡವಳಿಕೆ ಖಂಡಿಸಿ, ಉಮೇಶ್ ಕತ್ತಿ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿ, ಈ ಕೆಳಗಿನ ಹ್ಯಾಷ್‌ಟ್ಯಾಗ್ ಬಳಸಿ, @BJP4Karnataka, @BSYBJP, ಉಮೇಶ್ ಕತ್ತಿ ಅವರನ್ನು ಟ್ಯಾಗ್ ಮಾಡಿ ಎಂದು ಕಾಂಗ್ರೆಸ್ ಹೇಳಿದೆ.

ಅಲ್ಲದೆ, ನಿಮ್ಮ ಟ್ವಿಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪೋಸ್ಟ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.