ADVERTISEMENT

ಶಾಸಕರ ರಾಜೀನಾಮೆ: ಮೋದಿ ವಿರುದ್ಧ ಗುಡುಗಿದ ಸುರ್ಜೆವಾಲಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 15:25 IST
Last Updated 6 ಜುಲೈ 2019, 15:25 IST
   

ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 13 ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸುರ್ಜೇವಾಲಾ ಹರಿಹಾಯ್ದಿದ್ದಾರೆ.

ಹೊಸಬಗೆಯ ಕುದುರೆ ವ್ಯಾಪಾರ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮುನ್ನಲೆಗೆ ಬಂದಿದ್ದು, ದೇಶದಲ್ಲಿ ಹಾನಿಕಾರಕ ಪಕ್ಷಾಂತರದ ಬೆಳವಣಿಗೆ ನಿರ್ಮಿಸಲಾಗಿದೆ.ಇದಕ್ಕೆ ಮೋದಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ 13 ಶಾಸಕರು ಶನಿವಾರ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೆ ಕಾಂಗ್ರೆಸ್‌ನಹಿರಿಯ ನಾಯಕರಾದ ಆನಂದ್‌ ಶರ್ಮಾ, ಗುಲಾಂ ನಬಿ ಆಜಾದ್‌, ಮೋತಿಲಾಲ್‌ ವೋರಾ, ಅಹ್ಮದ್‌ ಪಟೇಲ್‌, ಮಲ್ಲಿಕಾರ್ಜುನ ಖರ್ಗೆ, ಜ್ಯೋತಿರಾದಿತ್ಯ ಸಿಂಧಿಯಾ, ಜೀತೇಂದ್ರ ಸಿಂಗ್‌, ಸುರ್ಜೆವಾಲಾ ಹಾಗೂ ದೀಪೇಂದರ್‌ ಹೂಡಾ ಅವರುದೆಹಲಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ.

ADVERTISEMENT

ಕೇರಳ ಪ್ರವಾಸದಲ್ಲಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರೂ ಬೆಂಗಳೂರಿಗೆ ಆಗಮಿಸಿದ್ದಾರೆ.

ಇವನ್ನೂ ಓದಿ...
*ಕ್ಷಿಪ್ರ ಬೆಳವಣಿಗೆ| 12 ಶಾಸಕರಿಂದ ರಾಜೀನಾಮೆ ಸಲ್ಲಿಕೆ, ಶಾಸಕರಿಗೆ ಸಿಗದ ಸ್ಪೀಕರ್‌​
*ರಾಜೀನಾಮೆ ಪತ್ರ ಪಡೆದು ಸ್ವೀಕೃತಿ ನೀಡಲು ಸಿಬ್ಬಂದಿಗೆ ತಿಳಿಸಿದ್ದೇನೆ: ಸ್ಪೀಕರ್‌
*ವಿಶ್ವಾಸ ಗಳಿಸುವಲ್ಲಿ ಸಿಎಂ ವಿಫಲ, 14 ಶಾಸಕರು ರಾಜೀನಾಮೆ ನೀಡಿದ್ದೇವೆ: ವಿಶ್ವನಾಥ್
*ರಾಜ್ಯ ರಾಜಕೀಯ | ಗೋವಾ, ಮಹಾರಾಷ್ಟ್ರದ ರೆಸಾರ್ಟ್‌ನತ್ತ ರಾಜೀನಾಮೆ ನೀಡಿದ ಶಾಸಕರು​
*ಮತ್ತೆ 10 ಶಾಸಕರಿಂದ ರಾಜೀನಾಮೆ ಪರ್ವ?
*ರಾಜೀನಾಮೆ ಪರ್ವ | ಹೋಗುವವರನ್ನು ಹಿಡಿದುಕೊಳ್ಳಲು ಆಗಲ್ಲ: ಡಿ.ಕೆ.ಶಿವಕುಮಾರ್​
*ರಾಜೀನಾಮೆ ನೀಡುತ್ತಿಲ್ಲ–ಸುಬ್ಬಾರೆಡ್ಡಿ ಸ್ಪಷ್ಟನೆ; ಪ್ರತಿಕ್ರಿಯೆಗೆ ಸಿಗದ ಸುಧಾಕರ್
*ರಾಜೀನಾಮೆ ಸಲ್ಲಿಸಿದ ಕೆ.ಸಿ.ನಾರಾಯಣಗೌಡ ಮನೆಗೆ ಪೊಲೀಸ್ ಭದ್ರತೆ​
*ಅತೃಪ್ತರ ಮನವೊಲಿಕೆಗೆ ಡಿಕೆಶಿ ಎಂಟ್ರಿಕೊಟ್ಟಿದ್ದಾರೆ, ಕಾದು ನೋಡೋಣ: ಸಿದ್ದರಾಮಯ್ಯ​
*ರಾಜೀನಾಮೆ ಪರ್ವ | ರಾಜಭವನಕ್ಕೆ ತೆರಳಿದ 8 ಮಂದಿ ಶಾಸಕರು
*ಸಿದ್ರಾಮು’ ಕಟ್ಟಿಹಾಕಲು ಗೌಡರ ‘ಪಟ್ಟು’
*ಮದ್ದಿಲ್ಲದ ರೋಗ; ಮಧ್ಯಂತರ ರಾಗ​
*ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್
*ಸಾಕಾಗಿದೆ, ಏನಾದರೂ ಮಾಡಿಕೊಳ್ಳಲಿ: ಸಿದ್ದರಾಮಯ್ಯ​
*ರಾಜ್ಯ ರಾಜಕೀಯ | ಗೋವಾ, ಮಹಾರಾಷ್ಟ್ರದ ರೆಸಾರ್ಟ್‌ನತ್ತ ರಾಜೀನಾಮೆ ನೀಡಿದ ಶಾಸಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.