ADVERTISEMENT

ನನ್ನ ಪರಮಾಪ್ತ ಅನಂತ್‌ಕುಮಾರ್: ಭಾವುಕ ಟ್ವೀಟ್ ಮಾಡಿದ ಯಡಿಯೂರಪ್ಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2019, 2:26 IST
Last Updated 12 ನವೆಂಬರ್ 2019, 2:26 IST
ಹೋರಾಟದ ದಿನಗಳು... 1996ರ ಸೆಪ್ಟೆಂಬರ್‌ 17ರಂದು ಬೆಂಗಳೂರಿನ ಆದಾಯ ತೆರಿಗೆ ಕಚೇರಿ ಎದುರು ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌.  (ಚಿತ್ರ: ಪ್ರಜಾವಾಣಿ ಸಂಗ್ರಹ)
ಹೋರಾಟದ ದಿನಗಳು... 1996ರ ಸೆಪ್ಟೆಂಬರ್‌ 17ರಂದು ಬೆಂಗಳೂರಿನ ಆದಾಯ ತೆರಿಗೆ ಕಚೇರಿ ಎದುರು ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌. (ಚಿತ್ರ: ಪ್ರಜಾವಾಣಿ ಸಂಗ್ರಹ)   

ಬೆಂಗಳೂರು: ‘ನನ್ನ ಪರಮಾಪ್ತ ಅನಂತ್‌ಕುಮಾರ್‌ ನಮ್ಮನ್ನಗಲಿದೆ ದಿನ ನೆನೆದರೆ ಮನಸ್ಸು ಭಾರವಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಮುಂಜಾನೆ ಬಿಜೆಪಿಯ ದಿವಂಗತ ನಾಯಕ ಎಚ್‌.ಎನ್‌.ಅನಂತ್‌ಕುಮಾರ್ ಅವರನ್ನು ಭಾವುಕವಾಗಿನೆನಪಿಸಿಕೊಂಡಿದ್ದಾರೆ.

ಅನಂತ್‌ಕುಮಾರ್‌ ಅವರ ಮೊದಲ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಗೆಳೆಯನನ್ನು ನೆನಪಿಸಿಕೊಂಡಿರುವ ಬಿಎಸ್‌ವೈ, ‘ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರಕ್ಕೆ ಕೊಂಡಿಯಂತಿದ್ದಅದ್ವಿತೀಯ ನಾಯಕ’ ಅಂದು ನುಡಿಗೌರವ ಅರ್ಪಿಸಿದ್ದಾರೆ.

‘ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಯಡಿಯೂರಪ್ಪ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಅನಂತ್‌ಕುಮಾರ್‌ ಅವರ ಒಡನಾಟ,ಗೆಳೆತನ ಮತ್ತು ಮುನಿಸುಗಳ ಬಗ್ಗೆ ಬಿಜೆಪಿ ವಲಯಯದಲ್ಲಿ ಸಾಕಷ್ಟು ಕಥೆಗಳಿವೆ. ಯಡಿಯೂರಪ್ಪ ಅವರು ತಮ್ಮ ರಾಜಕೀಯ ಬದುಕಿನ ಆರಂಭದ ದಿನಗಳಲ್ಲಿ ಅನಂತ್‌ಕುಮಾರ್‌ ಮತ್ತು ಅವರ ಪತ್ನಿ ತೇಜಸ್ವಿನಿ ಅವರಿದ್ದ ಕೊಠಡಿಯಲ್ಲಿಯೇ ವಾಸವಿದ್ದರು.

ಹುಬ್ಬಳ್ಳಿಯಲ್ಲಿ ವಿಶೇಷ ಕಾರ್ಯಕ್ರಮ

ಅನಂತ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಲವು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ,ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ ಎಂದು ದಿವಂಗತ ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಮಾಹಿತಿಗೆ ಮೊ– 93420 16419, 9880 164456 ಸಂಪರ್ಕಿಸಿ. ಸ್ಥಳ– ಗೋಕುಲ ಗಾರ್ಡನ್, ಗೋಕುಲ ರಸ್ತೆ, ಹುಬ್ಬಳ್ಳಿ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.