ADVERTISEMENT

ಇಟಲಿಯಲ್ಲಿ ನಡೆದ ರೇಸ್‌ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ: ಅಪಾಯದಿಂದ ಪಾರು

ಪಿಟಿಐ
Published 21 ಜುಲೈ 2025, 10:41 IST
Last Updated 21 ಜುಲೈ 2025, 10:41 IST
   

ನವದೆಹಲಿ: ಇಟಲಿಯಲ್ಲಿ ನಡೆದ ಕಾರು ರೇಸ್‌ ವೇಳೆ ತಮಿಳು ನಟ ಅಜಿತ್‌ ಕುಮಾರ್‌ ಅವರ ಕಾರು ಅಪಘಾತಕ್ಕೀಡಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.

GT4 ಯುರೋಪಿಯನ್‌ ಸೀರೀಸ್‌ನ ಎರಡನೇ ಸುತ್ತಿನಲ್ಲಿ ಮಿಸಾನೊ ಟ್ರಾಕ್‌ನಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅಜಿತ್‌ ಅವರು ರೇಸ್‌ನಿಂದ ಹೊರಬಿದ್ದಿದ್ದಾರೆ. ಜುಲೈ 20ರಂದು ಘಟನೆ ನಡೆದಿದೆ.

ಈ ಕುರಿತು GT4 ಯುರೋಪಿಯನ್‌ ಸೀರೀಸ್‌ ಅಧಿಕೃತ ಎಕ್ಸ್‌ ಖಾತೆಯಲ್ಲಿ ಕಾರು ಅಪಘಾತಕ್ಕೀಡಾದ ಬಳಿಕದ ವಿಡಿಯೊ ಹಂಚಿಕೊಂಡಿದ್ದು, ’ಹಾನಿಯೊಂದಿಗೆ ಅಜಿತ್‌ ರೇಸ್‌ನಿಂದ ಹೊರಬಿದ್ದಿದ್ದರೂ ಅವರ ಬಗ್ಗೆ ನಮಗೆ ಗೌರವವಿದೆ. ಅವರು ಚಾಂಪಿಯನ್‌ ಆಗಿದ್ದಾರೆ’ ಎಂದು ಬರೆಯಲಾಗಿದೆ.

ADVERTISEMENT

ಈ ಹಿಂದೆ ಫೆಬ್ರುವರಿಯಲ್ಲಿ ಸ್ಪೇನ್‌ನ ವಲೆನ್ಸಿಯಾ ನಗರದಲ್ಲಿ ನಡೆದ ಪೋಶೆ ಸ್ಪ್ರಿಂಟ್ ಚಾಲೆಂಜ್‌ ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ ಅಜಿತ್‌ ಕುಮಾರ್‌ ಅವರ ಕಾರು ಎರಡು ಬಾರಿ ಅಪಘಾತಕ್ಕೀಡಾಗಿತ್ತು. ಅದೃಷ್ಟವಶಾತ್ ಆಗಲೂ ಅಪಾಯದಿಂದ ಪಾರಾಗಿದ್ದರು.

54 ವರ್ಷದ ನಟ ಅಜಿತ್‌ ಕುಮಾರ್‌, ಕಾರು ರೇಸ್‌ನ ಪ್ಯಾಶನ್‌ ಹೊಂದಿದ್ದಾರೆ. ಜರ್ಮನಿ, ಮಲೇಷಿಯಾ ಸೇರಿ ಹಲವು ದೇಶಗಳಲ್ಲಿ ಕಾರು ರೇಸ್‌ನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ 2003ರಲ್ಲಿ ಫಾರ್ಮುಲಾ ಏಷ್ಯಾ ಬಿಎಂಡಬ್ಲ್ಯು ಚಾಂಪಿಯನ್‌ಶಿಪ್‌ ಮತ್ತು 2010ರಲ್ಲಿ ಪಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.