ADVERTISEMENT

ರಷ್ಯಾ ಶಾಲೆಯಲ್ಲಿ ಗುಂಡಿನ ದಾಳಿ: 11 ಮಂದಿ ಸಾವು

ಏಜೆನ್ಸೀಸ್
Published 11 ಮೇ 2021, 10:20 IST
Last Updated 11 ಮೇ 2021, 10:20 IST
ರಷ್ಯಾದ ಕಜಾನ್‌ ನಗರದಲ್ಲಿ ಗುಂಡಿನ ದಾಳಿ ನಡೆದ ಹೈಸ್ಕೂಲ್‌ಗೆ ಬಂದ ರಕ್ಷಣಾ ಪಡೆ        – ರಾಯಿಟರ್ಸ್‌ ಚಿತ್ರ
ರಷ್ಯಾದ ಕಜಾನ್‌ ನಗರದಲ್ಲಿ ಗುಂಡಿನ ದಾಳಿ ನಡೆದ ಹೈಸ್ಕೂಲ್‌ಗೆ ಬಂದ ರಕ್ಷಣಾ ಪಡೆ        – ರಾಯಿಟರ್ಸ್‌ ಚಿತ್ರ   

ಮಾಸ್ಕೊ: ‘ಮಧ್ಯ ರಷ್ಯಾದ ಕಜಾನ್‌ ನಗರದಹೈಸ್ಕೂಲ್‌ವೊಂದರಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಟಾಟರ್ಸ್ತಾನ ಗಣರಾಜ್ಯದ ಕಜಾನ್‌ ನಗರದ ಕ್ರಮಸಂಖ್ಯೆ 175ನೇ ಶಾಲೆಯಲ್ಲಿ ಇಬ್ಬರು ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮೂಲಗಳು ಹೇಳಿವೆ.

‘17 ವರ್ಷ ದಾಳಿಕೋರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮತ್ತೊಬ್ಬ ವ್ಯಕ್ತಿ ಈಗಲೂ ಶಾಲೆಯೊಳಗಿದ್ದಾನೆ. ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ವಿದ್ಯಾರ್ಥಿಗಳೇ ಅಧಿಕ ಇದ್ದು, ಒಬ್ಬ ಶಿಕ್ಷಕರೂ ಮೃತಪಟ್ಟಿದ್ದಾರೆ. ಈಗಾಗಲೇ ಪೊಲೀಸರು ಶಾಲೆಯ ನಾಲ್ಕನೇ ಅಂತಸ್ತನ್ನು ಮುಚ್ಚಿದ್ದಾರೆ. ಮತ್ತೊಬ್ಬ ದಾಳಿಕೋರರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಇಂಟ್ರಾಫ್ಯಾಕ್ಸ್‌ ವರದಿ ಮಾಡಿದೆ.

ADVERTISEMENT

ರಷ್ಯಾದ ಶಾಲೆಗಳಲ್ಲಿ ಗುಂಡಿನ ದಾಳಿ ನಡೆಯುವುದು ಅಪರೂಪ. ಆದರೆ ವಿದ್ಯಾರ್ಥಿಗಳೇ ಶಾಮೀಲಾದ ಗುಂಡಿನ ದಾಳಿ, ಸಹಪಾಠಿಗಳ ಕೊಲೆಯಂತಹ ಘಟನೆಗಳು ಆಗಾಗ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.