ವಾಷಿಂಗ್ಟನ್: ಅಮೆರಿಕದಲ್ಲಿ ತಯಾರಾಗದ ಎಲ್ಲಾ ಕಾರುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘ಕಾರುಗಳನ್ನು ಅಮೆರಿಕದಲ್ಲೇ ನಿರ್ಮಿಸಿದರೆ ಯಾವುದೇ ರೀತಿಯ ಸುಂಕ ವಿಧಿಸುವುದಿಲ್ಲ’ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾದ ಬಳಿಕ ಭಾರತ ಸೇರಿದಂತೆ ಕೆಲ ದೇಶಗಳ ಸುಂಕ ನೀತಿ ವಿರುದ್ಧ ಸಮರ ಸಾರಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರವಾಗಿದ್ದು, ‘ಸುಂಕಗಳ ರಾಜ’ ಎಂದೆಲ್ಲ ಜರೆದಿದ್ದಾರೆ.
ಶೇ 55ರಷ್ಟು ಆಮದಿಗೆ ಸುಂಕ ಕಡಿತ?
ನವದೆಹಲಿ: ಅಮೆರಿಕದಿಂದ ಆಮದಾಗುವ ಅರ್ಧಕ್ಕಿಂತ ಹೆಚ್ಚು (ಶೇ 55) ವಸ್ತುಗಳ ಮೇಲಿನ ಸುಂಕವನ್ನು ಭಾರತ ಕಡಿತಗೊಳಿಸಲು ಮುಕ್ತವಾಗಿದೆ. ಅದರ ಮೌಲ್ಯ ₹1.96 ಲಕ್ಷ ಕೋಟಿ (23 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದೆ ಎಂದು ಎರಡೂ ದೇಶಗಳ ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದದ ಮೊದಲ ಹಂತದ ಭಾಗವಾಗಿ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪರಸ್ಪರ ಸುಂಕದಿಂದ ಪರಿಹಾರ ಪಡೆಯುವ ಗುರಿಯನ್ನು ಇದು ಹೊಂದಿದೆ. ಇದು ಈ ವರ್ಷದ ಅತಿದೊಡ್ಡ ಸುಂಕ ಕಡಿತವಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.