ADVERTISEMENT

ಇರಾನ್‌ ಮೇಲಿನ ಯುದ್ಧ ಹಲವು ವಾರಗಳ ಕಾಲ ನಡೆಯಬಹುದು: ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 3 ಮಾರ್ಚ್ 2026, 3:04 IST
Last Updated 3 ಮಾರ್ಚ್ 2026, 3:04 IST
<div class="paragraphs"><p>ಡೊನಾಲ್ಡ್‌ ಟ್ರಂಪ್</p></div>

ಡೊನಾಲ್ಡ್‌ ಟ್ರಂಪ್

   

ದುಬೈ: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಸೋಮವಾರವು ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಭೀಕರ ದಾಳಿ ಮಾಡುವುದನ್ನು ಮುಂದುವರಿಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಮತ್ತು ಅದರ ಮಿತ್ರಪಡೆಗಳು ಇಸ್ರೇಲ್, ಕುವೈತ್, ಯುಎಇ ಹಾಗೂ ಇಂಧನ ಉತ್ಪಾದನೆಯ ಪ್ರಮುಖ ಕೇಂದ್ರಗಳ ಮೇಲೆ ಪ್ರತಿದಾಳಿ ನಡೆಸಿವೆ.

ADVERTISEMENT

‘ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ. ಸಂಘರ್ಷವು ಸದ್ಯಕ್ಕೆ ಶಮನಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರ್ಯಾಚರಣೆಗಳು ಇನ್ನೂ 4 ರಿಂದ 5 ವಾರಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ, ಆದರೆ ಅಮೆರಿಕವು ಅದಕ್ಕಿಂತಲೂ ಹೆಚ್ಚಿನ ಸಮಯದವರೆಗೆ ಹೋರಾಡಲು ಸಿದ್ಧವಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

‘ಇರಾನ್‌ನ ಕ್ಷಿಪಣಿ ಸಾಮರ್ಥ್ಯವನ್ನು ನಾಶಪಡಿಸಲು, ಅದರ ನೌಕಾಪಡೆಯನ್ನು ಧ್ವಂಸಗೊಳಿಸಲು, ಆ ದೇಶವು ಪರಮಾಣು ಅಸ್ತ್ರಗಳನ್ನು ಪಡೆಯದಂತೆ ತಡೆಯಲು ಮತ್ತು ಹಿಜ್ಬುಲ್ಲಾದಂತಹ ಮಿತ್ರ ಸಂಘಟನೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಲು ಅಮೆರಿಕ ಪಡೆಗಳು ದೃಢನಿಶ್ಚಯ ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್‌ ಭದ್ರತಾ ಪಡೆಯ ಉನ್ನತ ಅಧಿಕಾರಿ ಅಲಿ ಲಾರಿಜಾನಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.