
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಗಾಜಾ ಕದನ ವಿರಾಮಕ್ಕೆ ಯಾವುದೇ ಅಪಾಯ ಇಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಗಾಜಾ ಮೇಲೆ ಕೂಡಲೇ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆದೇಶ ಹೊರಡಿಸಿದ್ದರು.
ಈ ಕುರಿತು ಏರ್‌ಪೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, 'ಗಾಜಾ ಒಪ್ಪಂದಕ್ಕೆ ಅಪಾಯವಿಲ್ಲ. ಒಂದು ವೇಳೆ ಇಸ್ರೇಲ್ ಸೈನಿಕರು ಮೃತಪಟ್ಟಿದ್ದರೆ ಪ್ರತಿದಾಳಿ ನಡೆಸಬೇಕು' ಎಂದು ಹೇಳಿದ್ದಾರೆ.
ತನ್ನ ಸೇನೆಯ ಮೇಲೆ ದಾಳಿ ಮಾಡಿದ ಹಮಾಸ್, ಕದನ ವಿರಾಮ ನಿಯಮವನ್ನು ಉಲ್ಲಂಘಿಸಿದೆ ಎಂದು ಇಸ್ರೇಲ್ ಆರೋಪಿಸಿತ್ತು. ಇದಕ್ಕೆ ಪ್ರತಿಯಾಗಿ ಗಾಜಾ ಮೇಲೆ ಪ್ರಬಲ ದಾಳಿ ನಡೆಸುವಂತೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಆದೇಶ ನೀಡಿದ್ದರು.
'ಇಸ್ರೇಲ್ ಸೇನೆಯ ಮೇಲೆ ದಾಳಿ ನಡೆದಾಗ ಪ್ರತಿದಾಳಿ ನಡೆಸಲೇಬೇಕು' ಎಂದೂ ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.