ADVERTISEMENT

ಜರ್ಮನಿಯಿಂದ ಬೆಂಗಳೂರಿಗೆ ಹೊರಟ ವಿಮಾನ ಇಸ್ತಾಂಬುಲ್‌ನಲ್ಲಿ ತುರ್ತು ಲ್ಯಾಂಡಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2022, 3:02 IST
Last Updated 20 ಅಕ್ಟೋಬರ್ 2022, 3:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್‌ನ ವಿಮಾನ ವೈದ್ಯಕೀಯ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್ ಮಾಡಲಾಯಿತು.

ಇದರಿಂದಾಗಿ ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಪ್ರಮಾಣಿಕರು 24 ತಾಸಿಗೂ ಹೆಚ್ಚು ಕಾಲ ತೊಂದರೆ ಎದುರಿಸಿದರು.

ಈ ಕುರಿತು ಪ್ರಕಟಣೆ ಹೊರಡಿಸಿರುವ ಲುಫ್ತಾನ್ಸಾ, ತುರ್ತು ಪರಿಸ್ಥಿತಿಯಿಂದಾಗಿ ಆಮ್ಲಜನಕದ ಸಿಲಿಂಡರ್‌ಗಳನ್ನು ಬದಲಾಯಿಸಬೇಕಿತ್ತು. ಆದರೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಂಡಿತು ಎಂದು ಹೇಳಿದೆ.

ADVERTISEMENT

ಪ್ರಮಾಣಿಕರು ತಮಗೆ ಎದುರಾದ ತೊಂದರೆ ಬಗ್ಗೆ ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಮಗುವಿನೊಂದಿಗೆ ಪ್ರಯಾಣಿಸುವ ತಾಯಂದಿರಿಗೂ ನೆರವು ಸಿಗುತ್ತಿಲ್ಲ. ಔಷಧಿ ಕೂಡ ದೊರಕಿಲ್ಲ ಎಂದು ಹೇಳಿದ್ದಾರೆ.

ಸುಮಾರು 30 ಗಂಟೆಗಳ ಕಾಲ ಲುಫ್ತಾನ್ಸಾದಿಂದ ಯಾವುದೇ ಅಧಿಕೃತ ಸಂವಹನ ಇರಲಿಲ್ಲ. ಕೆಲವು ಅಧಿಕಾರಿಗಳು ತಾಂತ್ರಿಕ ತೊಂದರೆ ಅಂಥ ಹೇಳುತ್ತಿದ್ದಾರೆ. ಬದಲಾದ ಸಮಯದ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಿಲ್ಲ. ಇದರಿಂದ ಗೊಂದಲ ಸೃಷ್ಟಿಯಾಯಿತು ಎಂದು ತೊಂದರೆಗೆ ಸಿಲುಕಿರುವ ಯಾತ್ರಿ ಸೌಭಾಗ್ಯಲಕ್ಷ್ಮೀ ಹೇಳಿದರು.

ಮಂಗಳವಾರ ಫ್ರಾಂಕ್‌ಫರ್ಟ್‌ನಿಂದ ಹೊರಟ ಎಲ್‌ಎಚ್ 754 ವಿಮಾನವು ಮರುದಿನ ಭಾರತವನ್ನು ತಲುಪುವ ನಿರೀಕ್ಷೆಯಿತ್ತು. ಆದರೆ ವಿಮಾನ ಟೇಕ್ ಆಫ್ ಆದ ಒಂದು ತಾಸಿನೊಳಗೆ ತುರ್ತು ಪರಿಸ್ಥಿತಿಯಿಂದಾಗಿ ಇಸ್ತಾಂಬುಲ್‌ನಲ್ಲಿ ಇಳಿಯಬೇಕಾಯಿತು. ಈಗ 24ಕ್ಕೂ ಹೆಚ್ಚು ತಾಸು ವಿಳಂಬದಿಂದಾಗಿ ಇಂದು ಬೆಂಗಳೂರಿಗೆ ತಲುಪುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.