ADVERTISEMENT

ಸಂಶೋಧಕ ಗೋಕರ್ಣದ ನಾರಾಯಣ ಹೊಸಮನೆ ಅವರನ್ನು ಉನ್ನತ ವಿದ್ವಾಂಸ ಎಂದ ScholarGPS

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2025, 6:00 IST
Last Updated 26 ಮೇ 2025, 6:00 IST
<div class="paragraphs"><p>ನಾರಾಯಣ ಹೊಸಮನೆ</p></div>

ನಾರಾಯಣ ಹೊಸಮನೆ

   

ವಾಷಿಂಗ್ಟನ್‌: ಬೋರಾನ್‌ ರಸಾಯನವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಯನ್ನು ಪರಿಗಣಿಸಿ ಗೋಕರ್ಣ ಮೂಲದ ವಿಜ್ಞಾನಿ ನಾರಾಯಣ ಸದಾಶಿವ ಹೊಸಮನೆ ಅವರನ್ನು ಉನ್ನತ ವಿದ್ವಾಂಸ ಎಂದು ಸ್ಕಾಲರ್‌ಜಿಪಿಎಸ್‌ ಗುರುತಿಸಿದೆ.

2024ರ ಸ್ಕಾಲರ್‌ಜಿಪಿಎಸ್‌ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ನಾರಾಯಣ ಅವರ ಈವರೆಗಿನ ಸಾಧನೆಯನ್ನು ಪರಿಗಣಿಸಿ ಉನ್ನತ ವಿದ್ವಾಂಸ ಎಂದು ಗುರುತಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ADVERTISEMENT

ಕುಮಟಾದ ಡಾ. ಎ.ವಿ.ಬಾಳಿಗಾ ಕಾಲೇಜಿನಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಡಿನ್ಬಬರ್ಗ್‌ನಲ್ಲಿ ಪಿಎಚ್‌.ಡಿ. ಪದವಿ ಪಡೆದ ಅವರು ಜಗತ್ತಿನ ಹಲವು ರಾಷ್ಟ್ರಗಳ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನ ಹಾಗೂ ಸಂಶೋಧನೆ ನಡೆಸಿದ್ದಾರೆ. ಅಮೆರಿಕದ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಡೆಕಾಲ್ಬ್‌ನಲ್ಲಿರುವ ಲೊಮಾ ಲಿಂಡಾ ವೈದ್ಯಕೀಯ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿದ್ದಾರೆ.

ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಒಳಗೊಂಡು ಒಟ್ಟು 14 ವಿಶಾಲ ಕ್ಷೇತ್ರಗಳಲ್ಲಿನ 177 ವಿಷಯಗಳು ಮತ್ತು 3.5 ಲಕ್ಷ ವಿಶೇಷತೆಗಳನ್ನು ಸ್ಕಾಲರ್‌ಜಿಪಿಎಸ್‌ ಪರಿಗಣಿಸಿ ಉನ್ನತ ವಿದ್ವಾಂಸ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.